ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ಸಹ ಸಾರಥಿ ನೇಮಕಗೊಂಡಿದ್ದಾರೆ. ನಿಗಮದ ಉಪಾಧ್ಯಕ್ಷರಾಗಿ ಮೋಹನ್ ಮೆಣಸಿನಕಾಯಿ ಪದಗ್ರಹಣ ಸಮಾರಂಭ ಗಮನಸೆಳೆಯಿತು.
ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಇಂದು ಮೋಹನ ಮೆಣಸಿನಕಾಯಿ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರ ಹುದ್ದೆಯ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿ ಅನ್ಬುಕುಮಾರ್ ಅವರು ನೂತನ ಉಪಾಧ್ಯಕ್ಷರಿಗೆ ಹೂಗುಚ್ಚ ನೀಡಿ ಶುಭ ಹಾರೈಸಿದರು.