ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಹೆಮ್ಮೆಯ ಸಾರಿಗೆ ಸಂಸ್ಥೆ KSRTCಯ ಮಹತ್ವಾಕಾಂಕ್ಷೆಯ EV ಪವರ್ ಪ್ಲಸ್ ಬಸ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. EV ಪವರ್ ಪ್ಲಸ್ ಬಸ್ ಪ್ರಾಯೋಗಿಕ ಸಂಚಾರದಲ್ಲೇ ಶಹಬ್ಬಾಸ್ಗಿರಿ ಗಿಟ್ಟಿಸಿಕೊಂಡಿದೆ.
EV ಪವರ್ ಪ್ಲಸ್ ಬಸ್ನ ಪ್ರಾಯೋಗಿಕ ಚಾಲನೆ ಬೆಂಗಳೂರು-ರಾಮನಗರ ನಡುವೆ ನಡೆಸಲಾಯಿತು. ಜನವರಿ 16ರಂದು ಸೋಮವಾರ ಬೆಂಗಳೂರು-ಮೈಸೂರು ನಡುವೆ ಈ ಬಸ್ಸು ಕಾರ್ಯಚರಣೆ ನಡೆಸಲಿದೆ.
EV ಪವರ್ ಪ್ಲಸ್ ಸುಸಜ್ಜಿತ ಬಸ್ ಟಿಕೆಟ್ ಕೂಡಾ ದುಬಾರಿಯಲ್ಲ ಎಂಬುದು ಪ್ರಯಾಣ ಅನುಭವಿಸಿರುವ ಮಂದಿಯ ಮಾತುಗಳು. ಐರಾವತ ಕ್ಲನ್ ಕ್ಲಾಸ್ ಬಸ್ ಪ್ರಯಾಣ ದರಕ್ಕಿಂತ ರೂ.30 ಕಡಿಮೆ ಟಿಕೆಟ್ ದರವನ್ನು EV ಪವರ್ ಪ್ಲಸ್ ಬಸ್ಗೆ ನಿಗದಿಪಡಿಸಲಾಗಿದೆ ಎಂಬುದು ಕೆಎಸ್ಸಾರ್ಟಿಸಿ ಅಧಿಕಾರಿಗಳ ಮಾತು.
ಮುಂದಿನ 49 ಬಸ್ಸುಗಳು ಫೆಬ್ರವರಿ ಎರಡನೇ ವಾರದಲ್ಲಿ ಕೆಎಸ್ಸಾರ್ಟಿಸಿಗೆ ಸೇರ್ಪಡೆಯಾಗಲಿದ್ದು, ಬೆಂಗಳೂರು-ದಾವಣಗೆರೆ, ಬೆಂಗಳೂರು-ಚಿಕ್ಕಮಗಳೂರು, ಬೆಂಗಳೂರು-ಶಿವಮೊಗ್ಗ, ಬೆಂಗಳೂರು- ಮಡಿಕೇರಿ, ಬೆಂಗಳೂರು- ವಿರಾಜಪೇಟೆ ಮಾರ್ಗಗಳಲ್ಲಿ ಸಂಚರಿಸಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಕಟಣೆ ತಿಳಿಸಿದೆ.