ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಯಲ್ಲಿ ಚಾಲಕ-ಕಂ-ನಿರ್ವಾಹಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಹುತೇಕ ಪರಿಪೂರ್ಣವಾಗಿದ್ದು ನೇಮಕಗೊಂಡ ಅಭ್ಯರ್ಥಿಗಳ ಸ್ಥಳ ನಿಯೋಜನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಹೊಸದಾಗಿ ನೇಮಕಗೊಂಡ ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆಗೆ ಗಣಕೀಕೃತ ಕೌನ್ಸಿಲಿಂಗ್ ನಡೆಸಲಾಗುತ್ತಿಡೇ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಜಾಹೀರಾತು ಸಂ.1/2020 ದಿನಾಂಕ 14.02.2020ರಂತೆ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ, ಆಯ್ಕೆ ಪಟ್ಟಿಯ ಜ್ಯೇಷ್ಠತೆಯನ್ವಯ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನೇರವಾಗಿ ವಿಭಾಗ/ಘಟಕಗಳಿಗೆ ನಿಯೋಜನೆ ಮಾಡಲಾಗುತ್ತದೆ.
- 16.06.2025 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕ್ರಮ ಸಂಖ್ಯೆ 1- 325 ವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಕ್ರಮಸಂಖ್ಯೆ 326-650 ರವರೆಗಿನ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಯಲಿದೆ.
- 18.06.2025ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ 651-1050 ರವರೆಗೆ, ಹಾಗೂ ಮಧ್ಯಾಹ್ನ 1.30 ರಿಂದ ಕ್ರಮ ಸಂಖ್ಯೆ 1051- 1350 ರವರೆಗಿನ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಯಲಿದೆ.
- 19.06.2025 ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಕ್ರಮ ಸಂಖ್ಯೆ 1351-1700ರವರೆಗೆ ಹಾಗೂ ಮಧ್ಯಾಹ್ನ 1.30 ರಿಂದ ಕ್ರಮ ಸಂಖ್ಯೆ 1701- 2000 ವವರೆಗಿನ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಯಲಿದೆ.
ಈ ಕ್ರಮ ಸಂಖ್ಯೆಗಳ ಅಭ್ಯರ್ಥಿಗಳು ನಿಗಮದ, ಕೇಂದ್ರಕಚೆರಿ, ಶಾಂತಿನಗರ, ಬೆಂಗಳೂರು ಇಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್-ಸೈಟ್ ksrtcjobs.karnataka.gov.in ರಲ್ಲಿ ಲಭ್ಯವಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಸದರಿ ನೇಮಕಾತಿ ಮತ್ತು ಸ್ಥಳ ನಿಯೋಜನೆಯು ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಮಾನವ ಹಸ್ತಕ್ಷೇಪರಹಿತವಾಗಿದ್ದು, ಗಣಕೀಕೃತ ವ್ಯವಸ್ಥೆಯ ಮೂಲಕ ನೇರ ನಿಯೋಜನೆ ನಡೆಯುತ್ತಿರುವುದರಿಂದ ಅಭ್ಯರ್ಥಿಗಳು ಯಾವುದೇ ಆಮಿಷ ಅವ್ಯವಹಾರದಲ್ಲಿ ತೊಡಗಬಾರದೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.