ಬೆಂಗಳೂರು: ಪ್ರದೇಶ ಕಾಂಗ್ರೆಸ್ನಲ್ಲೀಗ ವೀಡಿಯೋವೊಂದು ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಪಕ್ಷದಲ್ಲಿ ಯಾವುದೂ ಸರಿ ಇಲ್ಲ ಎಂಬುದಾಗಿ ಈ ವೀಡಿಯೋ ಅನಾವರಣ ಮಾಡಿದೆ.
ಪಕ್ಷದ ನೈತಿಕತೆಯ ವಿಚಾರ ಬಗ್ಗೆ ಚರ್ಚೆಗೆ ಎಡೆ ಮಾಡಿಕೊಟ್ಟಿರುವ ನಾಯಕರ ಭಾಷಣಧ ತುಣುಕು, ಪಕ್ಷವು ದುಡ್ಡಿದ್ದವರತ್ತ ಮುಖಮಾಡಿದೆ ಎಂಬುನ್ನು ಅನಾವರಣ ಮಾಡಿದೆ.
ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪೋಸ್ಟ್ ಮಾಡಿದೆ. ‘ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗಳ ಸಮೇತ, ಪಕ್ಷದ ನಾಯಕರೂ ಮಾರಾಟವಾಗಿದ್ದಾರೆ ಎನ್ನುವುದು ಸಾಬೀತಾಗಿದೆ. ಕೆಪಿಸಿಸಿ ಸಂಯೋಜಕರೇ ಕೆಪಿಸಿಸಿ ಅಧ್ಯಕ್ಷರು ಖರೀದಿಯಾಗಿದ್ದಾರೆ ಎಂದು ಪಕ್ಷದ ಸತ್ಯವನ್ನು ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗಳ ಸಮೇತ, ಪಕ್ಷದ ನಾಯಕರೂ ಮಾರಾಟವಾಗಿದ್ದಾರೆ ಎನ್ನುವುದು ಸಾಬೀತಾಗಿದೆ. @INCKarnatakaದ ಕೆಪಿಸಿಸಿ ಸಂಯೋಜಕರೇ, @DKShivakumar ಖರೀದಿಯಾಗಿದ್ದಾರೆ ಎಂದು ಪಕ್ಷದ ಸತ್ಯವನ್ನು ಬಹಿರಂಗಪಡಿಸಿದ್ದಾರೆ..#CorruptCongress pic.twitter.com/EODnZes7R2
— BJP Karnataka (@BJP4Karnataka) December 7, 2022
ಇದೇ ವೇಳೆ, ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಸತ್ಯ ಹೇಳಿದವರಿಗೆ ಸ್ಥಾನ ಇಲ್ಲ ಎಂದಿದ್ದಾರೆನ್ನಲಾದ ಕಾಂಗ್ರೆಸ್ ಪಕ್ಷದ ಸಂಯೋಜಕರನ್ನು ಹುದ್ದೆಯಿಂದ ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಹೊರಡಿಸಿರುವ ಆದೇಶದ ಪ್ರತಿಯನ್ನೂ ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಸತ್ಯ ಹೇಳಿದವರಿಗೆ ಸ್ಥಾನ ಇಲ್ಲ. @INCKarnatakaದ ಬಣ್ಣ ಬಯಲು ಮಾಡಿದ ಕೆಪಿಸಿಸಿ ಸಂಯೋಜಕರನ್ನೇ, @DKShivakumar ವಜಾಗೊಳಿಸುವ ಮೂಲಕ ಆರೋಪಕ್ಕೆ ಪುಷ್ಟಿ ನೀಡಿದ್ದಾರೆ.#CorruptCongress pic.twitter.com/m9e0Tggeox
— BJP Karnataka (@BJP4Karnataka) December 7, 2022