ಬೆಂಗಳೂರು: ಒಕ್ಕಲಿಗರಿಗೂ ಹೆಚ್ಚಿನ ಮೀಸಲಾತಿ ಬೇಕೆಂಬ ಕೂಗು ಎದ್ದಾಗಲೇ ಪೊಲೀಸ್ ಪಾಳಯದಲ್ಲಿ ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತಿದ್ದ ಟಿ.ಕೋನಪ್ಪರೆಡ್ಡಿ ಹೆಸರು ಕೂಡಾ ಟ್ರೆಂಡಿಂಗ್ ಆಗಿದೆ. ಅದಾಗಲೇ ಯಾರು ಈ ಕೋನಪ್ಪ ರೆಡ್ಡಿ ಹೆಸರು ಟ್ರೆಂಡಿಂಗ್ ಆಗಲು ಕಾರಣ ಏನೆಂಬ ಕುತೂಹಲ ಕೂಡಾ ಅನೇಕರನ್ನು ಕಾಡತೊಡಗಿದೆ.
ಒಕ್ಕಲಿಗರ ಸಂಘ ಈ ಹಿಂದೆ ಬಹುತೇಕ ವಿವಾದಗಳನ್ನೆ ಹೊತ್ತು ಸಾಕಷ್ಟು ಮುಜುಗರಕ್ಕೆ ಒಳಗಾಗಿತ್ತು, ಆದರೆ ಇದೀಗ ರಾಜ್ಯ ಒಕ್ಕಲಿಗರ ಸಂಘ ಅಭಿವೃದ್ದಿ ಹೊಂದುತ್ತಿದ್ದು, ವಿವಾದಗಳಿಂದಲೂ ಹೊರ ಬರುತ್ತಿದೆ. ಸಮುದಾಯದಲ್ಲಿ ಆಶಾದಾಯಕ ನಿರ್ಣಯಗಳ ಮೂಲಕ ಹುಮ್ಮಸ್ಸು ಹೆಚ್ಚಿಸಿದೆ.
ಒಕ್ಕಲಿಗರ ಸಂಘ ಎಂದರೆ ವಿವಾದ ಗೂಡು ಎಂದೇ ಬಿಂಬಿತವಾಗಿತ್ತು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಈ ಪ್ರಭಾವಿ ಸಂಘದಲ್ಲಿ ಅವ್ಯವಹಾರಗಳದ್ದೆ ದರ್ಭಾರ್ ಆಗಿತ್ತು. ಇದೀಗ 2022ರಲ್ಲಿ ಆಯ್ಕೆಯಾದ ಹೊಸ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯ ದೃಡ ಸಂಕಲ್ಪ, ನಿರ್ಧಾರದಿಂದ ಹೊಸ ಆಯಾಮ ದೊರೆತಿದ್ದು ಅಧ್ಯಕ್ಷರಾದ ಬಾಲಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿಯಾದ ಟಿ.ಕೋನಪ್ಪರೆಡ್ಡಿ ಸಾರಥದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆದಿವೆ ಎಂಬುದು ಸಮುದಾಯದವರ ಸಂತಸದ ಮಾತುಗಳು. ನಿರೀಕ್ಷಿತ ಕಾರ್ಯಕ್ರಮಗಳು ಕಾರ್ಯಗತ ಆಗುತ್ತಿರುವುದು ಸಮಯದಲ್ಲಿ ಹೊಸ ಹುಮ್ಮಸ್ಸು ಹೆಚ್ಚಿಸಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ತಂಡ ಮೊದಲಿಗೆ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಿದೆ. 5 ಮತ್ತು 6 ನೇ ವೇತನ ಜಾರಿ ಮಾಡಿ ನೌಕರರಿಗೆ ನೆರವಾಗಿದ್ದಾರೆ, ಖಾಯಮಾತಿಗೆ ನಡೆಯುತ್ತಿದ್ದ ಹೋರಾಟಕ್ಕೆ ಶುಭ ಅಂತ್ಯ ಮಾಡಿದ್ದು ಎಲ್ಲರನ್ನೂ ಖಾಯಂ ಮಾಡಲಾಗಿದೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಪ್ರಧಾನ ಕಾರ್ಯದರ್ಶಿಯಾದ ಟಿ.ಕೋನಪ್ಪರೆಡ್ಡಿ ತಂಡ ಉತ್ತಮ ಕೆಲಸ ಮಾಡುತ್ತಿದೆ ಎಂಬ ವಿಚಾರ ಕುರಿತಂತೆ ಗುಣಾತ್ಮಕ ಚರ್ಚೆ ನಡೆಯುತ್ತಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಈ ಕ್ರಿಯಾಶೀಲ ತಂಡದ ಕಾರ್ಯ ಚಟುವಟಿಕೆಗಳು ಸಮುದಾಯದ ಉನ್ನತಿಗೆ ಪರಿಪೂರ್ಣ ಬಳಕೆಯಾಗಬೇಕೆಂಬ ಹಿರಿಯರ ಅಭಿಪ್ರಾಯಗಳೂ ಪ್ರಸ್ತುತ ಎಲ್ಲರ ಗಮನಕೇಂದ್ರೀಕರಿಸಿದೆ.

























































