ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನು ಕೋಲಾರದಲ್ಲೇ ಸ್ಪರ್ಧಿಸುವುದಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿವರಿಗೆ ನನ್ನನ್ನು ಕಂಡರೇ ಭಯ. ನಾನು ಎಲ್ಲಿ ನಿಂತರೂ ಗೆಲ್ಲುತ್ತೇನೆ. ಬಾದಾಮಿಯಲ್ಲಿ ನಿಂತರೂ ಗೆಲ್ಲುತ್ತೇನೆ, ಕೋಲಾರದಲ್ಲಿ ನಿಂತರೂ ಗೆಲುತ್ತೇನೆ ಎಂದರು.
ಬಾದಾಮಿ ದೂರ ಆಗುತ್ತಿತ್ತು. ಕೋಲಾರ ಹತ್ತಿರ ಅಂತ ಅಲ್ಲಿರುವ ಕಾರ್ಯಕರ್ತರು ಕರೆದರು ಎಂದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿ ನಿಲ್ಲುವುದಕ್ಕೆ ತೀರ್ಮಾನಿಸಿದ್ದೇನೆ ಎಂದರು. ಹೈಕಮಾಂಡ್ ತೀರ್ಮಾನಿಸಿದರೆ ಕೋಲಾರದಲ್ಲೇ ಸ್ಪರ್ಧೆ ಎಂದರು.
ನನ್ನ ಮಗ ವರುಣಾದಲ್ಲಿ ಗೆದ್ದಿದ್ದಾನೆ. ಆತ ನನಗೆ ವರುಣಾದಲ್ಲಿ ನಿಲ್ಲುವಂತೆ ಹೇಳಿದ್ದಾನೆ. ಆದರೆ ನಾನು ಕೋಲಾರದಲ್ಲಿ ಸ್ಪರ್ಧೆಗೆ ತೀರ್ಮಾನಿಸಿದ್ದೇನೆ ಎಂದವರು ಹೇಳಿದರು.