ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲಾ ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ಸಾಧನೆ ತೋರಿ ರಾಜ್ಯದ ಗಮನಸೆಳೆದಿದ್ದಾರೆ. ಸುಳ್ಯದ ಜಾಲ್ಸುರು ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕು.ಶ್ರೇಯಾ (10ನೇ ತರಗತಿ) – ಪ್ರಥಮ ಹಾಗೂ 2 ದ್ವಿತೀಯ ಪ್ರಶಸ್ತಿ- ಕು.ದೇವಿಕಾ (9ನೇ ತರಗತಿ) – ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ,
- ಕು.ಪ್ರಣವಿ ಶೆಟ್ಟಿ (8ತರಗತಿ)- ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ,
- ಕು.ಮಿತ್ರ (8ನೇ ತರಗತಿ) – 2 ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ,
- ಕು.ತ್ರಿಷಾ (8ನೇ ತರಗತಿ) – 2 ಪ್ರಥಮ ಪ್ರಶಸ್ತಿ
- ಕು.ರಿತಿಕಾ (8ನೇ ತರಗತಿ) – 2 ಪ್ರಥಮ ಪ್ರಶಸ್ತಿ,
- ಕು.ಶಿವಾನಿ (8ನೇ ತರಗತಿ) – ಪ್ರಥಮ ಹಾಗೂ ತೃತೀಯ ಪ್ರಶಸ್ತಿ,
- ಕು.ಜಿಷಾ (8ನೇ ತರಗತಿ) – 2 ಪ್ರಥಮ ಪ್ರಶಸ್ತಿ,
- ಹರ್ಷಿತ್.ಹೆಚ್ (8ನೇ ತರಗತಿ)- ಪ್ರಥಮ ಪ್ರಶಸ್ತಿ,
- ಮಂಜುನಾಥ (9ನೇ ತರಗತಿ) – 2 ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ,
- ಪ್ರವೀಣ್ (9ನೇ ತರಗತಿ) – ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ,
- ಗಣೇಶ್ (9ನೇ ತರಗತಿ)- 2 ತೃತೀಯ ಪ್ರಶಸ್ತಿ,
- ಧನ್ವಿತ್ (8ನೇ ತರಗತಿ) – ತೃತೀಯ ಪ್ರಶಸ್ತಿ,
- ಹರ್ಷಿತ್ ( 8ನೇ ತರಗತಿ) – ತೃತೀಯ ಪ್ರಶಸ್ತಿ,

ಈ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಗೆದ್ದು, ಇದೀಗ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ.


























































