ಬೆಂಗಳೂರು: ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿರುವ ಭರವಸೆಯ 5ನೇ ಗ್ಯಾರೆಂಟಿ ಜಾರಿಗೆ ಚಾಲನೆ ಸಿಕ್ಕಿದೆ. ಈ ಯೋಜನೆಯ ಫಲಾನುಭವಿಗಳಾಗುವುದು ಎಂಬ ಪ್ರಶ್ನೆಗಳೂ ಹರಿದಾಡುತ್ತಿವೆ.
ಯುವನಿಧಿ ಯೋಜನೆಯು ರಾಜ್ಯದ ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನಿರುದ್ಯೋಗ ಭತ್ಯೆ ಒದಗಿಸುವ ಕಾರ್ಯಕ್ರಮವಾಗಿದೆ. ಈ ಯೋಜನೆ ಮೂಲಕ ಪದವೀಧರರಿಗೆ ಮಾಸಿಕ 3,000 ರೂಪಾಯಿ ಮತ್ತು ಡಿಪ್ಲೋಮಾ ಪಡೆದವರಿಗೆ 1,500 ರೂಪಾಯಿ ಸಿಗಲಿದೆ.
ಫಲನುಭವಿಗಳು ಯಾರು?
ಕರ್ನಾಟಕದ ನಿವಾಸಿಗಳು ಅರ್ಜಿ ಸಲ್ಲಿಸಬಹುದು.
2023ರಲ್ಲಿ ಪದವಿ/ಡಿಪ್ಲೊಮಾ ಪಡೆದಿರಬೇಕು
ಕನಿಷ್ಠ 180 ದಿನಗಳವರೆಗೆ ಯಾವುದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿಯಾಗಿರಬಾರದು.
SSLC ಅಂಕ ಪಟ್ಟಿ, ಪದವಿ/ಡಿಪ್ಲೋಮಾ ಪ್ರಮಾಣಪತ್ರ ಹೊಂದಿರಬೇಕು.
SSLC ನಂತರ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಡಿಪ್ಲೊಮಾ ಪ್ರಮಾಣಪತ್ರಗಳೊಂದಿಗೆ 8, 9 ಮತ್ತು 10ನೇ ಅಂಕಪಟ್ಟಿ ಸಲ್ಲಿಸಬಹುದು.
ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಆಧಾರ್-ಲಿಂಕ್ ಮಾಡಿದ ಬ್ಯಾಂಕ್ ಖಾತೆ ಹೊಂದಿರಬೇಕು.
ಸೇವಾಸಿಂಧು ಪೋರ್ಟಲ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಯುವನಿಧಿಗಾಗಿ ನೋಂದಾಯಿಸಿಕೊಳ್ಳಬಹುದು.
ಪ್ರತಿ ತಿಂಗಳ 25ರೊಳಗೆ ನೋಂದಾಯಿಸುವವರಿಗೆ ಆ ನಿರ್ದಿಷ್ಟ ತಿಂಗಳಿಗೆ ಹಣ ಸಿಗಲಿದೆ. 25 ತಾರೀಖಿನ ನಂತರ ಅರ್ಜಿ ಸಲ್ಲಿಸಿದಲ್ಲಿ ಮುಂದಿನ ತಿಂಗಳಿಗೆ ಅನ್ವಯವಾಗುವುದು.