ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೇರಲು ಸಜ್ಜಾಗಿರುವ ಕಾಂಗ್ರೆಸ್ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿದೆ. ಅಚ್ಚರಿಯ ನಿರ್ಧಾರವೊಂದರಲ್ಲಿ ರಾಜ್ಯದಲ್ಲಿ 30;30 ಸರ್ಕಾರ ರಚನೆಯ ಸೂತ್ರವನ್ನು ಹೈಕಮಾಂಡ್ ಮುಂದಿಟ್ಟಿದೆ. ಈ ಸೂತ್ರಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಸಹಮತ ವ್ಯಕ್ತಪಡಿಸಿದ್ದಾರೆ.
ಏನಿದು 30;30 ಸೂತ್ರ..?
30; 30 ತಿಂಗಳು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಸಿಎಂ ಸ್ಥಾನ ಹಂಚಿಕೊಳ್ಳುವುದೇ ಈ ಸೂತ್ರದ ತಿರುಳು. ಅದರಂತೆ ಮೊದಲ 30 ತಿಂಗಳ ಕಾಲ ಅಂದರೆ ಮೊದಲ ಎರಡೂವರೆ ವರ್ಷಗಳ ಅವಧಿಗೆ ಸಿದ್ದರಾಮಯ್ಯ ಅವರು ಸಿಎಂ ಆಗಲಿದ್ದಾರೆ. ಅನಂತರೆ 30 ತಿಂಗಳ ಕಾಲ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರ ಮುಂದುವರಿಸುವುದು.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಡಿಕೆಶಿ ಸಹೋದರ, ಸಂಸದ ಡಿ.ಕೆ.ಸುರೇಶ್, ಹೈಕಮಾಂಡ್ ಮುಂದಿಟ್ಟಿರುವ ಈ ಸೂತ್ರ ತಮಗೆ ತೃಪ್ತಿ ತಂದಿಲ್ಲ. ಆದರೂ ಪಕ್ಷದ ವರಿಷ್ಠರ ಸೂಚನೆಗೆ ಅನಿವಾರ್ಯವಾಗಿ ಸಮ್ನತಿಸಿರುವುದಾಗಿ ತಿಳಿಸಿದ್ದಾರೆ.


















































