ಬೆಂಗಳೂರು: ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ಆಸ್ತಿಕರ ಗಮನಕೇಂದ್ರೀಕರಿಸಿದೆ. ಈ ಯೋಜನೆಯಡಿ ರಾಮೇಶ್ವರ, ಕನ್ಯಾಕುಮಾರಿ, ಮದುರೈ, ತಿರುವನಂತಪುರಕ್ಕೆ ಯಾತ್ರೆ ತೆರಳುವವರಿಗೆ ರಾಜ್ಯ ಸರ್ಕಾರದಿಂದಲೇ 5000 ಸಹಾಯಧನವನ್ನು ನೀಡಲಾಗುತ್ತದೆ.
ಯಾತ್ತಾ ಆಸಕ್ತರಿಗಾಗಿ ಮಹತ್ವದ ಮಾಹಿತಿ ಹಂಚಿಕೊಂಡಿರುವಂತ ಮುಜರಾಯಿ ಖಾತೆಯನ್ನೂ ಒಳಗೊಂಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ರಾಮೇಶ್ವರ, ಕನ್ನಯಾಕುಮಾರಿ, ಮದುರೈ, ತಿರುವನಂತಪುರಕ್ಕೆ ಆಯೋಜಿಸಲಾಗಿದೆ ಎಂದಿದ್ದಾರೆ. ಈ ಯಾತ್ರೆಯು 18-01-2024ರಿಂದ ಐಆರ್ ಸಿಟಿಸಿ, ಐಟಿಎಂಎಸ್ ವೆಬ್ ಸೈಟ್ ಮೂಲಕ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ.
ಈ ಯಾತ್ರೆಯ 15,000 ರೂಪಾಯಿ ಪ್ಯಾಕೇಜ್ ಆಗಿದ್ದು ಕರ್ನಾಟಕ ಸರ್ಕಾರದಿಂದ 5,000 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಯಾತ್ರಿಯು ಕೇವಲ 10000 ಮಾತ್ರವೇ ಪಾವತಿಸಬೇಕಾಗಿದೆ ಎಂದವರು ತಿಳಿಸಿದ್ದಾರೆ.
ವಿಶೇಷ ರೈಲು 18-01-2024, 30-01-2024ರಂದು ನಿರ್ಗಮಿಸಲಿದ್ದು, 23-01-2024, 04-02-2024ರಂದು ಆಗಮಿಸಲಿದೆ
ಈ ಯಾತ್ರೆಯು 18-01-2024ರಿಂದ ಐಆರ್ಸಿಟಿಸಿ, ಐಟಿಎಂಎಸ್ ವೆಬ್ ಸೈಟ್ ಮೂಲಕ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾಗೆ ರೈಲು ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ ಹಾಗೂ ಯಶವಂತಪುರ ನಿಲ್ದಾಣಗಳಿಂದ ತೆರಳಲು ಯಾತ್ರಿಗಳಿಗೆ ಅವಕಾಶ ಇದೆ.
ಈ ಯಾತ್ರೆಗೆ https://www.irctctourism.comನಲ್ಲಿ ಟಿಕೆಟ್ ಬುಕ್ ಮಾಡಬಹುದು.
8595931291, 8595931292, 8595931294ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.