ಉಡುಪಿ: ಸಮುದ್ರ ಅಲೆಗಳ ಭೋರ್ಗರೆತದ ನಡುವೆ ಕನ್ನಡ ಡಿಂಡಿಮ.. ಉಡುಪಿ ಜಿಲ್ಲೆ ಮರವಂತೆ ಕಡಲ ಕಿನಾರೆಯಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಡೆದ ಆಚರಣೆಯ ಅನನ್ಯ ದೃಶ್ಯ ನಾಡಿನ ಗಮನಸೆಳೆದಿದೆ. ಈ ಆಚರಣೆಯ ದೃಶ್ಯಗಳಿಗೆ ಸಕತ್ ಲೈಕ್ಸ್ ವ್ಯಕ್ತವಾಗಿದೆ.
ಕೆಲವು ದಿನಗಳಿಂದೀಚೆಗೆ ತುಳು ಭಾಷೆಗೆ ಸರ್ಕಾರದಿಂದ ಅನ್ಯಾಯವಾಗಿದೆ ಎಂಬ ಬಗ್ಗೆ ಕರಾವಳಿ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಆದರೆ ನಾವು ಕನ್ನಡ ವಿರೋಧಿಗಳಲ್ಲ ಎಂಬ ನಿಲುವನ್ನೂ ಅನಾವರಣ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿಯಂತಿದೆ ಮರವಂತೆಯ ಈ ಕನ್ನಡ ಡಿಂಡಿಮ.
Kannada Rajyostava celebrations at Maravanthe Beach 💛 ❤#ಕನ್ನಡ #ಕನ್ನಡರಾಜ್ಯೋತ್ಸವ pic.twitter.com/NcBkySwrgb
— Dr Durgaprasad Hegde (@DpHegde) November 4, 2022






























































