ನವದೆಹಲಿ: ಬಾಲಿವುಡ್ ನಟಿ ಕಂಗನಾ ರನೌತ್ ನಟನೆಯ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಹಾಗೂ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಟಿ ಕಂಗನಾ ರನೌತ್ ಅವರು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.
UPDATE!#EmergencyComingSoon #Emergency #KanganaRanaut pic.twitter.com/jjGZSxE6UC
— Manikarnika Films Production (@ManikarnikaFP) May 15, 2024
ಮಣಿಕರ್ಣಿಕಾ ಫಿಲ್ಡ್ ಪ್ರೊಡಕ್ಷನ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ‘ನಮ್ಮ ಕ್ಲೀನ್ ಕಂಗನಾ ರನೌತ್ ಬಗ್ಗೆ ಪ್ರೀತಿಯಿದೆ. ಅವರು ರಾಷ್ಟ್ರಕ್ಕಾಗಿ ಕರ್ತವ್ಯ ಮತ್ತು ಸೇವೆ ಮಾಡುವ ಬದ್ಧತೆಗೆ ಆದ್ಯತೆ ನೀಡುತ್ತಿರುವುದರಿಂದ ನಮ್ಮ ಬಹು ನಿರೀಕ್ಷಿತ ಚಿತ್ರ ‘ಎಮರ್ಜೆನ್ಸಿ’ ಬಿಡುಗಡೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ಘೋಷಿಸಲಾಗುವುದು’ ಎಂದು ಬ್ಯಾನರ್ ಹೇಳಿದೆ.
‘ಎಮರ್ಜೆನ್ಸಿ’ ಚಿತ್ರವನ್ನು 2023ರ ನವೆಂಬರ್ 24ರಂದೇ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಆಗ ಮುಂದೂಡಲಾಗಿತ್ತು. ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮುಂದೂಡಲಾಗಿದೆ.