ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಭರ್ಜರಿ ಮನರಂಜನೆಯನ್ನು ಉಣಬಡಿಸುತ್ತಿದೆ. ನೂತನ ವರ್ಷದ ಉತ್ಸಾಹಕ್ಕೆ ಸ್ಪೂರ್ತಿಯಂತಿರುವ ‘ಕಾಟೇರ’ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ನಿರ್ದೇಶಕ ತರುಣ್ ಸುಧೀರ್ ಹಾಗೂ ದರ್ಶನ್ ಅವರ ಈ ಚಿತ್ರ ಮೂರು ದಿನಗಳಲ್ಲಿ 58 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಡಿಸೆಂಬರ್ 29ರಂದು ರಿಲೀಸ್ ಆಗಿರುವ ‘ಕಾಟೇರ’ ಮೊದಲ ದಿನ ಈ ಚಿತ್ರ 19.79 ಕೋಟಿ ರೂಪಾಯಿ ಗಳಿಸಿ ಯಶಸ್ಸಿನ ಮುನ್ನುಡಿ ಬರೆದರೆ, ಎರಡನೇ ದಿನ 17.35 ಕೋಟಿ ರೂಪಾಯಿ ಗಳಿಸಿದೆ. ವರ್ಷಾಅಂತ್ಯದ ದಿನ ಬರೋಬ್ಬರಿ 20.94 ಕೋಟಿ ರೂಪಾಯಿ ಗಳಿಸಿ ಸಾಧನೆ ಮಾಡಿದೆ. ಕೆಲವೇ ದಿನಗಳಲ್ಲಿ ನೂರು ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆಯನ್ನು ಚಿತ್ರ ತಂಡ ಹೊಂದಿದ್ದು ‘ಕಾಟೇರ’ ಸಿನಿಮಾ ದರ್ಶನ್ ಅಭಿಮಾನಿಗಳನ್ನೂ ಖುಷಿಯಲ್ಲಿ ತೇಲಾಡುವಂತೆ ಮಾಡಿದೆ.