ಬೆಂಗಳೂರು: ಕನ್ನಡಿಗರ ಹೆಮ್ಮೆಯ ಕರ್ನಾಟಕ ವಿದ್ಯುತ್ ಕಾರ್ಖಾನೆಯನ್ನು (ಕವಿಕಾ) ಕಡೆಗಣಿಸಿ, 174.73 ಕೋಟಿ ರೂ. ಮೊತ್ತದ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ರಾಜ್ಯ ಸರ್ಕಾರ, ಕೇರಳ ಮೂಲಕದ ಕಂಪನಿಗೆ ರತ್ನಗಂಬಳಿ ಹಾಸಿದೆ ಎಂದು ಪ್ರತಿಪಕ್ಷ ಜೆಡಿಎಸ್ ಆರೋಪಿಸಿದೆ.
ಕಳೆದ 8 ದಶಕಗಳಿಂದಲೂ ಗುಣಮಟ್ಟದ ಟ್ರಾನ್ಸ್ಫಾರ್ಮಾರ್ಗಳ ತಯಾರಿಕೆಯಲ್ಲಿ ದೇಶದಲ್ಲೇ ಪ್ರಖ್ಯಾತಿ ಪಡೆದಿರುವ ರಾಜ್ಯದ ಕವಿಕಾವನ್ನು ಬದಿಗೊತ್ತಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಕೇರಳ ಎಲೆಕ್ನಿಕಲ್ ಅಂಡ್ ಅಲೈಡ್ ಇಂಜನಿಯರಿಂಗ್ ಲಿಮಿಟೆಡ್ನಿಂದಲೇ 11,721 ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದಕ್ಕಾಗಿ 4 ಜಿ ವಿನಾಯಿತಿಯನ್ನೂ ನೀಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಬೆಂಗಳೂರಿನ ಯಲಹಂಕದ ಕೋಗಿಲು ಬಳಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಕೇರಳದ ವಲಸಿಗರಿಗೆ ವಸತಿ ಕಲ್ಪಿಸುವಂತೆ, ಕೇರಳದ ಸಿಎಂ ಪಿಣರಾಯಿ ವಿಜಯನ್ ಮತ್ತು ಅಲ್ಲಿನ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಮಧ್ಯ ಪ್ರವೇಶಿಸಿ, ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈಗ ಮತ್ತೊಮ್ಮೆ ಕೇರಳ ಲಾಬಿಗೆ ಮಣಿದು, ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಕನ್ನಡಿಗರ ಹೆಮ್ಮೆಯ ಕರ್ನಾಟಕ ವಿದ್ಯುತ್ ಕಾರ್ಖಾನೆಯನ್ನು (ಕವಿಕಾ) ಕಡೆಗಣಿಸಿ, 174.73 ಕೋಟಿ ರೂ. ಮೊತ್ತದ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು @INCKarnataka ಸರ್ಕಾರ, ಕೇರಳ ಮೂಲಕದ ಕಂಪನಿಗೆ ರತ್ನಗಂಬಳಿ ಹಾಸಿದೆ.
ಕಳೆದ 8 ದಶಕಗಳಿಂದಲೂ ಗುಣಮಟ್ಟದ ಟ್ರಾನ್ಸ್ಫಾರ್ಮಾರ್ಗಳ ತಯಾರಿಕೆಯಲ್ಲಿ ದೇಶದಲ್ಲೇ ಪ್ರಖ್ಯಾತಿ ಪಡೆದಿರುವ ರಾಜ್ಯದ… pic.twitter.com/MVEwnkkV58
— Janata Dal Secular (@JanataDal_S) January 8, 2026



















































