ಟೋಕಿಯೊ: ಜಪಾನ್’ನಲ್ಲಿ ಒಂದೆಡೆ ಭೂಕಂಪದ ಹೊಡೆತವಾದರೆ ಮತ್ತೊಂದೆಡೆ ಅಗ್ನಿ ಅನಾಹುತ ಜನರನ್ನು ಕಂಗೆಡಿಸಿದೆ. ಇದೇ ವೇಳೆ, ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಜಪಾನ್ ಏರ್‌ಲೈನ್ಸ್ ವಿಮಾನವೊಂದು ಬೆಂಕಿಗೆ ಆಹುತಿಯಾದ ಘಟನೆ ಭೀಕರತೆಗೆ ಸಾಕ್ಷಿಯಾಯಿತು. ಈ ವಿಮಾನದಲ್ಲಿ 350ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಪ್ರಯಾಣಿಕರ ವಿಮಾನ ರನ್ ವೇನಲ್ಲಿ ಒಂದು ವಿಮಾನ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆ ಕೂಡಲೇ ಕ್ಷಿಪ್ರ ಕಾರ್ಯಾಚರಣೆಗಿಳಿದ ರಕ್ಷಣಾ ತಂಡ ವಿಮಾನದಲ್ಲಿದ್ದವರನ್ನು ಅಪಾಯದಿಂದ ಪಾರು ಮಾಡಿದೆ. ಆದರೆ ಅಗ್ನಿ ಅನಾಹುತದಿಂದಾಗಿ ವಿಮಾನ ಹಾನಿಗೊಳೊಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
JAL plane on fire at Tokyo Airport
pic.twitter.com/EL9s7kVJbi— アトリン ✊🏾 (@phoojux) January 2, 2024






























































