ರಾಯಚೂರು : ಭಾಜಪ ಸಂಕಲ್ಪ ಯಾತ್ರೆ ವಿಜಯಯಾತ್ರೆಯಾಗಿ ಪರಿವರ್ತನೆಯಾಗಲಿದೆ. ರಾಯಚೂರಿನಿಂದ ಸಂಕಲ್ಪ ಯಾತ್ರೆ ಪ್ರಾರಂಭಿಸಲಾಗಿದ್ದು, ಇಲ್ಲಿಂದ ಕಾಂಗ್ರೆಸ್ನ್ನು ಧೂಳಿಪಟ ಮಾಡಿ ಭಾಜಪ ಸರ್ಕಾರದ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಯಚೂರು ತಾಲ್ಲೂಕಿನ ಗಿಲ್ಲೆಸಗೂರು ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗೆಸ್ ಅವರ ಕನಸು ಕನಸಾಗಿಯೇ ಉಳಿಯುತ್ತದೆ . ಕರ್ನಾಟಕದ ಜನ ಕಾಂಗ್ರೆಸ್ ನವರ ಆಡಳಿತವನ್ನ ನೋಡಿದ್ದಾರೆ. ನಮಗೆ ಭ್ರಷ್ಟಾಚಾರದ ಬಗೆಪಾಠ ಹೇಳುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಪೊಲೀಸ್ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಯಿತು. ಡಿಐಜಿ ವಿಚಾರಣೆಯಾಯಿತೇ ಹೊರತು, ಯಾವುದೇ ಕ್ರಮವಾಗಲಿಲ್ಲ. ಆದರೆ ಎಡಿಜಿಪಿ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಂಡಿದ್ದು ನಮ್ಮ ಸರ್ಕಾರ. ಇದು ಭಾಜಪ ಸರ್ಕಾರದ ನಿಲುವು. ಶಿಕ್ಷಕರ ನೇಮಕಾತಿಯಲ್ಲೂ ಭ್ರಷ್ಟಾಚಾರವಾಗಿದೆ. ಕಾಂಗ್ರೆಸ್ ಅವರದು ಭ್ರಷ್ಟ ನೌಕರಿ ಭಾಗ್ಯ. ದಿಂಬು, ಹಾಸಿಗೆ, ಕೆಲಸ ಮಾಡದೇ ಎಸ್ಸಿ ಎಸ್ ಟಿ ಜನಾಂಗದ 36 ಸಾವಿರ ಬೋರ್ವೆಲ್ ಬಿಲ್ ಮಾಡಿಕೊಂಡಿರಿ, ಸಣ್ಣ ನೀರಾವರಿ, ಡೀನೋಟಿಫಿಕೇಷನ್ ಸೇರಿದಂತೆ ಪ್ರತಿಯೊಂದು ಇಲಾಖೆಯಲ್ಲಿಯೂ ಕಾಂಗ್ರೆಸ್ ಸರ್ಕಾರದ ಹಗರಣವಿದೆ. ಸರಿಯಾದ ಸಮಯದಲ್ಲಿ ಈ ಪ್ರಕರಣದ ವಿಚಾರಣೆಗಳನ್ನು ನಡೆಸಲಾಗುವುದು. ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದರೆ ಜನ ಸುಮ್ಮನೆ ಬಿಡುವುದಿಲ್ಲ. ನಾವು ಅತ್ಯಂತ ಪ್ರಾಮಾಣಿಕ ಆಡಳಿತ ಕೊಡುತ್ತಿದ್ದೇವೆ ಎಂದರು.
ನಾವು ಕಾಂಗ್ರೆಸ್ ಪಕ್ಷದ ನಾಯಕರಿಗೆ ಸವಾಲು ಹಾಕುತ್ತಿದ್ದೇವೆ. ನೀವು ಈಗ ಗೆದ್ದಿರುವ ಸ್ಥಾನವನ್ನು ಮೊದಲು ಭದ್ರವಾಗಿ ಉಳಿಸಿಕೊಳ್ಳಿ. ನಾವು ಈ ಜನಸಂಕಲ್ಪ ಯಾತ್ರೆ ಮೂಲಕ ನಿಮ್ಮನ್ನು ಧೂಳಿಪಟ ಮಾಡಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ.
– ಶ್ರೀ @BSBommai#JanaSankalpaYatre pic.twitter.com/1JjZiTAAuJ
— BJP Karnataka (@BJP4Karnataka) October 11, 2022
ರಾಯಚೂರು ಜಿಲ್ಲೆಯ ಎಲ್ಲ 7 ವಿಧಾನಸಭಾ ಕ್ಷೇತ್ರಗಳನ್ನು ಭಾಜಪ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ.ರಾಯಚೂರಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ನವರು ತಮ್ಮ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳಲು ಮೊದಲು ಪ್ರಯತ್ನಿಸಲಿ ಎಂದು ಸವಾಲು ಹಾಕುತ್ತೇನೆ. ಇಡೀ ಕರ್ನಾಟಕದ ಜನಸಂಕಲ್ಪದಿಂದ 2023ಕ್ಕೆ ವಿಧಾನಸೌಧದಲ್ಲಿ ಕಮಲ ಅರಳುವಂತೆ ಮಾಡುವ ಮೂಲಕ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಮಾಡುವ ಸಂಕಲ್ಪವನ್ನು ಸಾಧಿಸಲು ಜನರು ಆರ್ಶಿವಾದಿಸಬೇಕು ಎಂದರು. ಎಸ್ ಸಿ ಎಸ್ ಟಿ ಜನಾಂಗಕ್ಕೆ ಆಗಿದ್ದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಅಪಸ್ವರ ಎತ್ತುತ್ತಿರುವವರನ್ನು ತಿರಸ್ಕರಿಸಬೇಕು ಎಂದರು.
ಅರ್ಕಾವತಿ ರೀಡೂ ಮಾಡಿ ಕೋಟ್ಯಂತರ ರೂ. ಮೌಲ್ಯದ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರಾಟ ಮಾಡಿದ @siddaramaiah ಅವರೇ, ಮುಖ್ಯಮಂತ್ರಿ ಆಗುವ ನಿಮ್ಮ ಕನಸು ಯಾವತ್ತಿಗೂ ನನಸಾಗುವುದಿಲ್ಲ.
– ಶ್ರೀ @BSYBJP #JanaSankalpaYatre pic.twitter.com/JIRlOnQzkW
— BJP Karnataka (@BJP4Karnataka) October 11, 2022























































