ಇಟಲಿ: ಸರ್ಕಸ್ ಎಂದರೆ ಸವಾಲುಗಳ ಜೊತೆಗಿನ ಸಮರ. ಅಲ್ಲಿ ಬ್ಯಾಲೆನ್ಸ್ ಎಂಬುದೇ ಯಶಸ್ಸಿನ ಸೂತ್ರ. ಬಹುತೇಕ ಸರ್ಕಸ್ಗಳಲ್ಲಿ ಪ್ತಾಣಿಗಳೂ ಆಕರ್ಷಣೆಯಾಗಿರುತ್ತದೆ. ಈ ಸರ್ಕಸ್ ಪ್ರಾಣಿಗಳನ್ನು ವಿಶೇಷ ತರಬೇತಿ ಮೂಲಕ ಪಳಗಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗುತ್ತದೆ.
ಈ ರೀತಿಯ ತರಬೇತಿ ವೇಳೆ ಸರ್ಕಸ್ನಲ್ಲಿನ ತರಬೇತುದಾರನ ಮೇಲೆಯೇ ಹುಲಿ ದಾಳಿ ಮಾಡಿದ ಘಟನೆ ಬೆಚ್ಚಿ ಬೀಳಿಸಿದೆ. ಇಟೆಲಿಯ ಲೆಸ್ಸೆಯಲ್ಲಿ ನಡೆದ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ..
https://twitter.com/LaSamy65280885/status/1609149329796743169?t=n0lUd0nYsTqnVrGGeYn7Ag&s=19
ತರಬೇತುದಾರ ಇವಾನ್ ಓರ್ಫೀ ಎಂಬಾತ ಒಂದು ಹುಲಿಯನ್ನು ಪಳಗಿಸುತ್ತಿದ್ದಾಗ ಸಮೀಪದಲ್ಲಿದ್ದ ಮತ್ತೊಂದು ಹುಲಿ ದಾಳಿಮಾಡಿದೆ. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇತರ ಕಲಾವಿದರು ಆತನನ್ನು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.























































