ಬೆಂಗಳೂರು: ಮಹತ್ವಾಕಾಂಕ್ಷೆಯ ಪುಷ್ಪಕ್ ಲ್ಯಾಂಡಿಂಗ್ ಪ್ರಯೋಗ (LEX) ನಲ್ಲಿ ಸತತ ಮೂರನೇ ಯಶಸ್ಸು. ಚಿತ್ರದುರ್ಗ ಈ ಮಹತ್ವದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
RLV-LEX3 Video pic.twitter.com/MkYLP4asYY
— ISRO (@isro) June 23, 2024
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ಭಾನುವಾರ ಮತ್ತೊಂದು ಪರೀಕ್ಷೆ ನಡೆಸಿ ಗಮನಸೆಳೆಯಿತು. ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್-RLV ಅಥವಾ ಪುಷ್ಪಕ್ ಲ್ಯಾಂಡಿಂಗ್ ಪ್ರಯೋಗ ದಲ್ಲಿ ಸತತ ಮೂರನೇ ಯಶಸ್ಸನ್ನು ಸಾಧಿಸಿದೆ ಎಂದು ಇಸ್ರೋ ಅಧಿಕಾರಿಗಳು ಸಂತಸ ಹಂಚಿಕೊಂಡಿದ್ದಾರೆ.
LEX-03 ಸರಣಿಯ ಮೂರನೇ ಪರೀಕ್ಷೆಯನ್ನು ಬೆಳಗ್ಗೆ 7.10ಕ್ಕೆ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ನಡೆಸಲಾಯಿತು ಎಂದು ಇಸ್ರೊ ತಿಳಿಸಿದೆ.
Hat-trick for ISRO in RLV LEX! 🚀
🇮🇳ISRO achieved its third and final consecutive success in the Reusable Launch Vehicle (RLV) Landing EXperiment (LEX) on June 23, 2024.
“Pushpak” executed a precise horizontal landing, showcasing advanced autonomous capabilities under… pic.twitter.com/cGMrw6mmyH
— ISRO (@isro) June 23, 2024