ಮುಂಬೈ: ಇತರ ತಂಡಗಳ ಸೋಲು ಗೆಲುವು ಬೇರೊಂದು ತಂಡದ ಭವಿಷ್ಯ ನಿರ್ಧರಿಸಬಹುದು ಎಂಬುದಕ್ಕೆ ಶನಿವಾರ ನಡೆದ ಐಪಿಎಲ್ ಪಂದ್ಯ ಸಾಕ್ಷಿಯಾಗಿದೆ. ಶನಿವಾರ ನಡೆದ 2 ಪಂದ್ಯಗಳಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಪ್ರಬಲ ಪಂಜಾಬ್ ತಂಡ ಮಂಡಿಯೂರಿದರೆ, ಡೆಲ್ಲಿ ವಿರುದ್ಧ ಚೆನ್ನೈ ಸೋಲು ಕಂಡಿದೆ. ಇದರ ಲಾಭ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ಗೆ ಸಿಕ್ಕಿದೆ.
ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಹಾವು-ಏಣಿ ಆಟ ಮುಂದುವರೆದಿದ್ದು, ರಾಜಸ್ತಾನ ರಾಯಲ್ಸ್ ವಿರುದ್ಧ ಪ್ರಬಲ ಪಂಜಾಬ್ ತಂಡ ಸೋಲು ಕಂಡ ನಂತರ ಭಾರೀ ಬದಲಾವಣೆಯಾಗಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೀಗ ಅಗ್ರ ಸ್ಥಾನಕ್ಕೇರಿದರೆ, ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ಇದೀಗ 4ನೇ ಸ್ಥಾನಕ್ಕೆ ಜಾರಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 9ನೇ ಸ್ಥಾನಕ್ಕೆ ಕುಸಿದಿದೆ. 4ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ನೇ ಸ್ಥಾನಕ್ಕೆ ಜಿಗಿದಿದೆ. ಗುಜರಾತ್ ಟೈಟನ್ಸ್ 3ನೇ ಸ್ಥಾನದಲ್ಲಿದೆ.