ನವದೆಹಲಿ: ಸೋಮಾಲಿಯಾ ಕಡಲುಗಳ್ಳರ ಹಾವಳಿ ಮತ್ತೆ ಮುಂದುವರಿದಿದ್ದು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ 17 ಮಂದಿ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಸಮುದ್ರ ಪ್ರದೇಶದಲ್ಲಿ ಸರಕು ಸಾಗಾಣಿಕಾ ಹಡಗೊಂದರ ಮೇಲೆ ದಾಳಿ ಮಾಡಿದ್ದ ಸೊಮಾಲಿಯಾ ಕಡಲ್ಗಳ್ಳರ ತಂಡ 17 ಮಂದಿ ನೌಕಾ ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಭಾರತೀಯ ನೌಕಾಪಡೆ ಕ್ಷಿಪ್ರ ಕಾರ್ಯಾಚರಣೆಗಿಳಿದಿದೆ. ಸತತ 40 ಗಂಟೆಗಳ ಕಾಲ ಹೋರಾಡಿ ನೌಕಾ ಸಿಬ್ಬಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ, ಸುಮಾರು 35 ಮಂದಿ ಕಡಲ್ಗಳ್ಳರನ್ನು ಬಂಧಿಸಿದೆ.
ಈ ಯಶಸ್ವೀ ಕಾರ್ಯಾಚರಣೆ ಬಗ್ಗೆನೌಕಾ ಪದೇ ವಕ್ತಾರರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
#IndianNavy thwarts designs of Somali pirates to hijack ships plying through the region by intercepting ex-MV Ruen.
The ex-MV Ruen, which had been hijacked by Somali pirates on #14Dec 23, was reported to have sailed out as a pirate ship towards conducting acts of #piracy on high… pic.twitter.com/gOtQJvNpZb
— SpokespersonNavy (@indiannavy) March 16, 2024
























































