ಲಕ್ನೋ: ಅಯೋಧ್ಯೆಯ ಶ್ರೀರಾಮ ದೇವಾಲಯಕ್ಕೆ ಪ್ರತಿದಿನ ಸರಾಸರಿ 2 ರಿಂದ 3 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದು, ಜನಸಂದಣಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ದೇವಾಲಯ ಲೋಕಾರ್ಪಣೆಯಾದ ನಂತರ ಶ್ರೀರಾಮನ ದರ್ಶನಕ್ಕೆ ಭಕ್ತರು ಮುಗಿಬೀಳುತ್ತಿದ್ದು, ಪುರಾಣ ಪ್ರಸಿದ್ಧ ನಗರಕ್ಕೆ ದೇಶದ ವಿವಿಧೆಡೆಯಿಂದ ಜನ ಭೇಟಿ ನೀಡುತ್ತಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ಭೇಟಿಯನ್ನು ಮುಂದೂಡಲ್ಪಟ್ಟಿದೆ. ಫೆಬ್ರವರಿ 10 ರ ನಂತರ ಭೇಟಿ ಮರು ನಿಗದಿಪಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರಿ ಮೂಲಗಳು ಸೂಚಿಸುತ್ತವೆ.
ಸಾಮಾನ್ಯ ಜನರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು, ಸರ್ಕಾರವು ಎಲ್ಲಾ ವಿಐಪಿ ಭೇಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು ವಿಐಪಿಗಳು ಅಯೋಧ್ಯೆಗೆ ತಮ್ಮ ಉದ್ದೇಶಿತ ಭೇಟಿಯನ್ನು ಕನಿಷ್ಠ ಒಂದು ವಾರ ಮುಂಚಿತವಾಗಿ ಸರ್ಕಾರಕ್ಕೆ ತಿಳಿಸಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ, ಮುಂದಿನ ವಾರವೂ ಯಾವುದೇ ಪ್ರಮುಖ ವಿಐಪಿ ಭೇಟಿಗೆ ಅವಕಾಶ ನೀಡುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ,