ಬೆಂಗಳೂರು: ವಿಶ್ವ ಹಿಂದೂ ಪರಿಷದ್‌ನ ಪ್ರಾಂತ ಕಾರ್ಯಾಲಯ ‘ಧರ್ಮಶ್ರೀ’ ಲೋಕಾರ್ಪಣೆಯಾಗಿದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಕೈಂಕರ್ಯ ಗಮನಸೆಳೆಯಿತು.
ಬೆಂಗಳೂರಿನ ಶಂಕರಪುರದಲ್ಲಿ ನಿರ್ಮಾಣವಾಗಿರುವ ‘ಧರ್ಮಶ್ರೀ’ ಕಾರ್ಯಾಲಯ ಧರ್ಮ ರಕ್ಷಣಾ ಕೈಂಕರ್ಯದ ಶಕ್ತಿಯಾಗಿರುವ ವಿಶ್ವ ಹಿಂದೂ ಪರಿಷದ್‌ನ ಕರ್ನಾಟಕ ದಕ್ಷಿಣ ಪ್ರಾಂತ ಚಟುವಟಿಕೆಗಳ ಕೇಂದ್ರಸ್ಥಾನವಾಗಲಿದೆ.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಹಿರಿಯ ಕಾರ್ಯಕರ್ತರಾದ ವೈ.ಕೆ.ರಾಘವೇಂದ್ರ ರಾವ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ, ಕ್ಷೇತ್ರೀಯ ಪ್ರಚಾರಕ್ ಸುಧೀರ್, ಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ್ ಶೆಣೈ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.