ದಾವಣಗೆರೆ: ಬಯಲುಸೀಮೆ ಜಿಲ್ಲೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಗಮನಸೆಳೆದಿದೆ. ದಾವಣಗೆರೆ ಪ್ರಮುಖ ನಗರಗಳಲ್ಲಿ ಒಂದಾಗಿದ್ದು, ಈ ಜಿಲ್ಲೆಯು ಸುಮಾರು 19.45 ಲಕ್ಷ ಜನಸಂಖ್ಯೆ ಹೊಂದಿದೆ. ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಲೋಕಾರ್ಪಣೆ ಮಾಡಿದರು. ಸ್ಮಾರ್ಟ್ ಸಿಟಿ ಯೋಜನೆಯ ಸಹಭಾಗಿತ್ವ ಮೂಲಕ ನಿರ್ಮಾಣವಾಗಿರುವ ಈ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ KSRTC ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ( ವಾಸು), ಸಚಿವರಾದ S.S. ಮಲ್ಲಿಕಾರ್ಜುನ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಅಬ್ದುಲ್ ಜಬ್ಬಾರ್, ಬಸಂತಪ್ಪ, ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದರು.
ಸುಸಜ್ಜಿತ ದಾವಣಗೆರೆ ಬಸ್ ನಿಲ್ದಾಣದ ವೈಶಿಷ್ಟ್ಯ ಹೀಗಿದೆ:
ದಾವಣಗೆರೆ ತಾಲ್ಲೂಕಿನಲ್ಲಿ 2 ಘಟಕಗಳು ಮತ್ತು ಹರಿಹರದಲ್ಲಿ ಒಂದು ಘಟಕ ಸೇರಿ ಒಟ್ಟಾರೆ 3 ಘಟಕಗಳನ್ನು ಹೊಂದಿದ್ದು 400 ವಾಹನಗಳ ಲಭ್ಯತೆಯಿಂದ 374 ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.
ಪ್ರಸ್ತುತ ಬಸ್ ನಿಲ್ದಾಣದಲ್ಲಿ ಪ್ರತಿ ದಿನ 1191 ಸರತಿಗಳ ಆಗಮನ ಮತ್ತು ನಿರ್ಗಮನವಾಗುತ್ತವೆ.
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 672 ಹಳ್ಳಿಗಳಿದ್ದು, (ಹೊನ್ನಾಳಿ ತಾಲ್ಲೂಕು ಹೊರತುಪಡಿಸಿ) ಇವುಗಳ ಪೈಕಿ 481 ಹಳ್ಳಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಮುಖ್ಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಕಛೇರಿ ಹಾಗೂ ಶಾಪಿಂಗ್ ಮಾಲ್ ಗಳನ್ನು ಒಳಗೊಂಡಿದ್ದು, ಶಾಪಿಂಗ್ ಮಾಲ್ನಲ್ಲಿ ಬಹುಪರದೇಯ 3 ಸಂಖ್ಯೆ (340+170+170 ಆಸನಗಳು) ಹಾಗೂ ವಾಣಿಜ್ಯ ಮಳಿಗೆಗಳು ಇದ್ದು, ಇದರಿಂದ ಮಾಸಿಕವಾಗಿ ಅಂದಾಜು ರೂ 69.70 ಲಕ್ಷ ವಾಣಿಜ್ಯ ಆದಾಯವನ್ನು ನಿರೀಕ್ಷಿಸಲಾಗಿದೆ.
ಬೇತೂರ್ ಬಸ್ ನಿಲ್ದಾಣದಿಂದ ಮಾಸಿಕವಾಗಿ ಅಂದಾಜು ರೂ 2.90 ಲಕ್ಷ ವಾಣಿಜ್ಯ ಆದಾಯವನ್ನು ನಿರೀಕ್ಷಿಸಲಾಗಿದೆ.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಪುನರ್ ನಿರ್ಮಿಸಲಾದ ಮುಖ್ಯ ಬಸ್ ನಿಲ್ದಾಣದ ವಿವರ:
06 ಎಕರೆ 07 ಗುಂಟೆ ನಿವೇಶನದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ & ಕ.ರಾ.ರ.ಸಾ.ನಿಗಮದ ಅನುದಾನ ಸೇರಿ ಅಂದಾಜು 120.00 ಕೋಟಿ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದೆ. ನಿಲ್ದಾಣ ಸಮುಚ್ಚಯ 5 ಅಂತಸ್ತನ್ನು ಹೊಂದಿದ್ದು, ಪ್ರಯಾಣಿಕರಿಗಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಬಸ್ ಟಿಕೇಟ್, ಬಸ್ ಪಾಸ್ ವಿತರಣಾ ಕೊಠಡಿ, ಮಹಿಳಾ ಪ್ರಯಾಣಿಕರ ವಿಶ್ರಾಂತಿ ಹಾಗೂ ಮಗು ಪೋಷಣಾ ಕೊಠಡಿ, ಪುರುಷರ ಹಾಗೂ ಮಹಿಳೆಯರ ಶೌಚಾಲಯ, ಪುರುಷರ ಹಾಗೂ ಮಹಿಳೆಯರ ಅಂಗವಿಕಲರ ಶೌಚಾಲಯ, ವಾಣಿಜ್ಯ ಮಳಿಗೆಗಳು, ಉಪಹಾರ ಗೃಹ, ಭದ್ರತಾ ಕೊಠಡಿ, ಶಾಪಿಂಗ್ ಮಾಲ್, ಸೋಲಾರ್ ಸೌಲಭ್ಯ, ಕುಡಿಯುವ ನೀರಿನ ವ್ಯವಸ್ಥೆ, • ಪ್ರಯಾಣಿಕರ ಆಸನದ ವ್ಯವಸ್ಥೆ, 104 ಕಾರು ಮತ್ತು 566 ದ್ವಿಚಕ್ರವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಬಸ್ ಬೇ ಸಂಖ್ಯೆ -46, ಬಸ್ ನಿಲ್ದಾಣಾಧಿಕಾರಿ,ಸಂಚಾರ ನಿಯಂತ್ರಕರ ಮತ್ತು ವಿಚಾರಣಾ ಕೊಠಡಿ ನಿರ್ಮಿಸಲಾಗಿದೆ.
ಇದೇ ವೇಳೆ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಬೇತೂರು ರಸ್ತೆ ಬಸ್ ನಿಲ್ದಾಣ ಕೂಡಾ ಸೇವೆಗೆ ಸಮರ್ಪಣೆಯಾಗಿದೆ. ಈ ಬಸ್ ನಿಲ್ದಾಣವೂ ಸಕಲ ಸೌಲಭ್ಯಗಳಿಂದ ಗಮನಸೆಳೆದಿದೆ.
ಬಸ್ ನಿಲ್ದಾಣದ ನಿವೇಶನದ ಒಟ್ಟು ವಿಸ್ತೀರ್ಣ- 01 ಎಕರೆ 20 ಗುಂಟೆ,
ಕಾಮಗಾರಿಯ ಅಂದಾಜು ಮೊತ್ತ- 10.00 ಕೋಟಿ
ಅನುದಾನದ ವಿವರ- ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಕ.ರಾ.ರ.ಸಾ.ನಿಗಮ (75:25)
ಒಟ್ಟು 3 ಅಂತಸ್ತಿನ ಬಸ್ ನಿಲ್ದಾಣಗಳಲ್ಲಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳು: ಬಸ್ ಟಿಕೇಟ್, ಬಸ್ ಪಾಸ್ ವಿತರಣಾ ಕೊಠಡಿ, ಮಹಿಳಾ ಪ್ರಯಾಣಿಕರ ವಿಶ್ರಾಂತಿ ಹಾಗೂ ಮಗು ಪೋಷಣಾ ಕೊಠಡಿ, ಪುರುಷರ ಹಾಗೂ ಮಹಿಳೆಯರ ಶೌಚಾಲಯ, ಪುರುಷರ ಹಾಗೂ ಮಹಿಳೆಯರ ಅಂಗವಿಕಲರ ಶೌಚಾಲಯ, ಸಂಚಾರ ನಿಯಂತ್ರಕರ ಕೊಠಡಿ, ಬಸ್ ಬೇ ಸಂಖ್ಯೆ-07, ವಾಣಿಜ್ಯ ಮಳಿಗೆಗಳು, ಉಪಹಾರ ಗೃಹ, ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರ ಆಸನದ ವ್ಯವಸ್ಥೆ, 254 ದ್ವಿಚಕ್ರವಾಹನಗಳ ಪಾರ್ಕಿಂಗ್ ವ್ಯವಸ್ಥೆ