ನವ ದೆಹಲಿ: ಹಲವು ರಾಜ್ಯಗಳಲ್ಲಿ ಮಾರ್ಚ್ 19ರವರೆಗೆ ಮಳೆಯಾಗಲಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಹವಾಮಾನ ಇಲಾಖೆ ಉತ್ತರಾಖಂಡ ಸಹಿತ ಉತ್ತರ ಭಾರತದ ಕೆಲವೆಡೆ ಮಳೆಯಾಗಲಿದೆ ಎಂದು ತಿಳಿಸಿದೆ. ಉತ್ತರಕಾಶಿ, ಚಮೋಲಿ, ಪಿಥೋರಗಢ, ಬಾಗೇಶ್ವರ ಮತ್ತು ರುದ್ರಪ್ರಯಾಗ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಜಾರ್ಖಂಡ್, ವಿದರ್ಭ, ಛತ್ತೀಸ್ಗಢ ಮತ್ತು ಪೂರ್ವ ಮಧ್ಯಪ್ರದೇಶದಲ್ಲಿ ಮಾರ್ಚ್ 16 ರಿಂದ 19 ರವರೆಗೆ ಮಳೆಯಾಗಲಿದೆ ಎಂದಿರುವ ಹವಾಮಾನ ಇಲಾಖೆ, ಕೇರಳ, ಮಹಾರಾಷ್ಟ್ರ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಬಿಸಿ ವಾತಾವರಣ ಇರಲಿದೆ ಎಂದಿದೆ.
ಕರ್ನಾಟಕ ರಾಜ್ಯದ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಕರಾವಳಿ, ಉತ್ತರ ಒಳನಾಡಿನಲ್ಲಿ. ಕಲಬುರಗಿ, ಬೆಳಗಾವಿ ಬಿಸಿ ವಾತಾವರಣ ಇರಲಿದೆ ಎಂದಿದೆ.