ನವದೆಹಲಿ: ಮಧ್ಯಪ್ರಾಚ್ಯ ಸಮರದ ನಂತರ ಹೌತಿ ಉಗ್ರರ ಕ್ರೌರ್ಯ ಹೆಚ್ಚಾಗಿದೆ, ಇದೀಗ ಭಾರತೀಯರಿದ್ದ ಮತ್ತೊಂದು ಭಾರತೀಯ ವ್ಯಾಪಾರಿ ಹಡಗಿನ ಮೇಳೆ ದಾಳಿ ನಡೆದಿದೆ.
22 ಭಾರತೀಯರಿದ್ದ ಮತ್ತೊಂದು ಭಾರತೀಯ ವ್ಯಾಪಾರಿ ಹಡಗಿನ ಮೇಳೆ ಗಲ್ಫ್ ಆಫ್ ಏಡನ್‌ನಲ್ಲಿ ಕ್ಷಿಪಣಿ ದಾಳಿ ನಡೆದಿದೆ. ವ್ಯಾಪಾರಿ ಹಡಗಿನ ಕರೆಗೆ ಸ್ಪಂದಿಸಿದ ಭಾರತೀಯ ಯುದ್ಧನೌಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.
























































