ಹನೂರು: ಚಾಮರಾಜನಗರ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟಗುಡ್ಡಗಳಿಂದ ಮಳೆಯ ನೀರು ಅಪಾರ ಪ್ರಮಾಣದಲ್ಲಿ ಹನೂರು ಸಮೀಪದ ಜಲಾಶಯಗಳಿಗೆ ಹರಿದು ಬರುತ್ತಿದೆ.
ಈ ಮಾರ್ಗದ ಮೂಲಕವೇ ಅಜ್ಜಿಪುರ ಸಫಾರಿ ಕೇಂದ್ರದ ವಾಹನಗಳು ಸಂಚರಿಸಬೇಕಾಗಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗಲಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಎರಡು ದಿನಗಳ ಕಾಲ ಅಜ್ಜಪುರ ಸಫಾರಿಯನ್ನು ನಿಲ್ಲಿಸಲಾಗಿದೆ. ಮಳೆ ಮುಂದುವರಿದರೆ ಇನ್ನೂ ಹಲವು ದಿನಗಳ ಕಾಲ ಸಫಾರಿಗೆ ತಡೆ ಬೀಳಲಿದೆ.
ಸುಂಕದಕಟ್ಟೆ ಹಳ್ಳದಲ್ಲಿ ಅತಿ ಹೆಚ್ಚು ನೀರು ಹರಿಯುತ್ತಿರುವುದರಿಂದ ಸಫಾರಿ ವಾಹನಗಳು ಸಂಚರಿಸಲು ಆಗುವುದಿಲ್ಲ, ಆದ್ದರಿಂದ ಸಫಾರಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಎರಡು ದಿನ ಸ್ಥಗಿತಗೊಳಿಸಲಾಗಿದೆ, ಹಾಗೆ ಹಳ್ಳದಲ್ಲಿ ನೀರಿನ ಹರಿವು ಕಡಿಮೆ ಆದ ನಂತರ ಸಫಾರಿಗೆ ಅವಕಾಶ ನೀಡಲಾಗುತ್ತದೆ ಎಂದು ಎಸಿಎಫ್ ಉಮಾಪತಿ
ತಿಳಿಸಿದ್ದಾರೆ.