ಹರಿದ್ವಾರ : ಶ್ರೀ ಕಾಶೀ ಮಠ ಸಂಸ್ಥಾನದ ಹರಿದ್ವಾರ ಶ್ರೀ ವ್ಯಾಸ ಮಂದಿರದ ಪ್ರತಿಷ್ಠಾ ದಿನ ಮಹೋತ್ಸವ ಇಂದು ನೆರವೇರಿತು. ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿದ ಈ ಕೈಂಕರ್ಯ ಭಕ್ತ ಸಮೂಹದ ಗಮನಸೆಳೆಯಿತು.
ಪ್ರಾತಃ ಕಾಲ ಸಂಸ್ಥಾನದ ಶ್ರೀ ದೇವರಿಗೆ ನೈರ್ಮಲ್ಯ ವಿಸರ್ಜನೆ ಬಳಿಕ ವ್ಯಾಸ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಭವ್ಯ ಶ್ರೀ ವ್ಯಾಸ ದೇವರಿಗೆ ಶ್ರೀಗಳವರ ಅಮೃತ ಹಸ್ತಗಳಿಂದ ಪಂಚಾಮೃತ , ಕ್ಷೀರಾಭಿಷೇಕ , ಪವಮಾನ ಅಭಿಷೇಕಗಳು ನೆರವೇರಿದವು.
ಬಳಿಕ ನೆರೆದ ಭಜಕರಿಗೆ ಪ್ರಸಾದ ನೀಡಿದರು ದೇಶದ ವಿವಿಧ ಭಾಗಗಳಿಂದ ನೂರಾರು ಭಕ್ತರು ಈ ಕೈಂಕರ್ಯದಲ್ಲಿ ಪಾಲ್ಗೊಂಡು ಪುನೀತರಾದರು.