ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಜಯಭೇರಿ ಭಾರಿಸಿದೆ. ಮತದಾನೋತ್ತರ ಸಮೀಕ್ಷೆಯ ಫಲಿತಾಂಶದಂತೆ ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಮರುಸ್ಥಾಪನೆಯಾಗಲಿದೆ.
ಮೊದಲ ಹಂತದ ಎಣಿಕೆಯ ಹೊತ್ತಿಗೇ ಬಿಜೆಪಿ ಮುನ್ನಡೆಯಲ್ಲಿತ್ತು. ಅಂತಿಮ ಹಂತದವರೆಗೂ ಬಿಜೆಪಿ ನಾಗಾಲೋಟದಲ್ಲೇ ಮುನ್ನಡೆಯಿತು. ಅಂತಿಮಬಮವಾಗಿ ಆಡಳಿತಾರೂಢ ಬಿಜೆಪಿ 156 ಸ್ಥಾನಗಳಲ್ಲಿ ಗೆದಿದೆ. ಕಾಂಗ್ರೆಸ್ 17 ಸ್ಥಾನಗಳಲ್ಲಿ ಜಯಗಳಿಸಿದೆ. ಆಮ್ ಆದ್ಮಿ 5 ಸ್ಥಾನಗಳನ್ನು ಪಡೆದಿದೆ, 4 ಕ್ಷೇತ್ರಗಳು ಇತರರರ ಪಾಲಾಗಿವೆ.