ಬೆಂಗಳೂರು: ಜಿಎಸ್‌ಟಿ ಕಾಯ್ದೆ ಸರಳೀಕರಣಕ್ಕೆ ಆಗ್ರಹಿಸಿ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಪರವಾಗಿ ಮನವಿ ಸಲ್ಲಿಸಲಾಯಿತು.
ಅದಕ್ಕೂ ಮುನ್ನ ದೊಡ್ಡಬಳ್ಳಾಪುರ ತಾಲೂಕು ಕಚೇರಿ ವೃತ್ತದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಿದ ಈ ಪ್ರತಿಭಟನೆಯಲ್ಲಿ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಕೆ.ಪಿ.ಲಕ್ಷ್ಮೀನಾರಾಯಣ ಮಾತನಾಡಿ, 2017ರಲ್ಲಿ ಅನುಷ್ಠಾನಕ್ಜೆ ಬಂದ ಕಾಯ್ದೆಗೂ ಇವತ್ತು ಇದ್ದ ಕಾಯ್ದೆಗೂ ವ್ಯತ್ಯಾಸ ಇರುವ ಕಾರಣದಿಂದ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ. ಹಾಗೂ ಸುಗಮವಾದ ತಂತ್ರಜ್ಞ ಪೂರೈಕೆಯಲ್ಲಿನ ಅಡೆ ತಡೆಯಿಂದ ಕಾರ್ಯದಲ್ಲಿ ಅಡಚಣೆ ಉಂಟಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸರಕು ಮತ್ತು ಸೇವಾ ಅಧಿಕಾರಿಗಳು ಸ್ಪಂದಿಸಿ ಆಗಿರುವ ತೊಂದರೆಯನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು.
ತೆರಿಗೆ ಸಲಹೆಗಾರರು ಸೇತುವೆ ಇದ್ದಂತೆ, ಅವರಿಂದ ಸೂಕ್ತ ಸಲಹೆಗಳೂ ಬಂದರೆ ಇಲಾಖೆಯೂ ಸ್ವಿಕರಿಸುತ್ತದೆ ಎಂದು ಸಹಾಯಕ ಆಯುಕ್ತ ಡಾ. ಎಂ.ಬಿ.ಚೇತನ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಹಿರಿಯ ಸಲಹೆಗಾರರಾದ ಎಸ್.ಡಿ.ಪರ್ವತಯ್ಯ, ಸಂಘದ ಅಧ್ಯಕ್ಷ ಕೆ.ಪಿ.ಲಕ್ಷ್ಮೀನಾರಾಯಣ, ಸೆಕ್ರೆಟರಿ ಎಸ್.ವಿ.ಎನ್.ಪ್ರಸಾದ್, ಖಜಾಂಚಿ, ಡಿ.ವಿ. ಕ್ರಿಷ್ಣಮೂರ್ತಿ, ಹಾಗೂ ಸರ್ವ ಸದಸ್ಯರು ವ್ಯಾಪಾರಸ್ಥ ಪ್ರತಿನಿಧಿಗಳು ಉಪಸ್ಥಿತರಿದ್ದರು.