ಬೆಂಗಳೂರು: ರಾಜ್ಯ ರಾಜಕಾರಣ ಇದೀಗ ರೌಡಿ ವಿಚಾರದಲ್ಲಿನ ಜಟಾಪಟಿಗೆ ಸಾಕ್ಷಿಯಾಗುತ್ತಿದೆ. ಬಿಜೆಪಿ ಸಂಸದರ ಜೊತೆ ರೌಡಿ ಶೀಟರ್ ಸೈಲೆಂಟ್ ಸುನಿಲ್ ವೇದಿಕೆ ಹಂಚಿಕೊಂಡಿದ್ದ ಪ್ರಸಂಗದ ನಂತರ ಬಿಜೆಪಿ ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟ ನಡೆಯುತ್ತಿದೆ.
ಬಿಜೆಪಿ ನಾಯಕರು ರೌಡಿ ಶೀಟರ್‌ಗಳ ಬಗ್ಗೆ ಸಾಫ್ಟ್ ಕಾರ್ನರ್ ನಿಲುವು ಹೊಂದಿದ್ದಾರೆಂಬ ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಎದಿರೇಟು ನೀಡುವ ಆತುರದಲ್ಲಿ ಬಿಜೆಪಿಯು ಡಿಕೆಶಿ-ಕೊತ್ವಾಲ್ ಫೊಟೋ ಪ್ರದರ್ಶಿಸಿತ್ತು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಅಮಿತ್ ಷಾ ಅವರ ಹಿನ್ನೆಲೆಯನ್ನು ಕೆದಕಿ ಬಿಜೆಪಿಯ ಅಧ್ಯಕ್ಷರತ್ತಲೇ ಬೊಟ್ಟು ಮಾಡಿದೆ. ಹೀಗಾಗಿ ಈ ‘ಸೈಲೆಂಟ್’ ವಿಷಯವು ಬಿಜೆಪಿಗೆ ತೀವ್ರ ಮುಜುಗರ ತಂದಿದೆ.
ಈ ನಡುವೆ ಕಾಂಗ್ರೆಸ್ ಪಕ್ಷದ ನಾಯಕರ ಗೂಂಡಾ ಪ್ರವೃತ್ತಿ ಕುರಿತು ಸರಣಿ ವೀಡಿಯೋಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳು, ಮಾಜಿ ಸಚಿವ ಕೆ.ಜೆ.ಜಾರ್ಜ್ ಪುರಾಣ ಸಹಿತ ಹಲವಾರು ಪ್ರಕರಣಗಳು ಈ ಸರಣಿ ವೀಡಿಯೋಗಳಲ್ಲಿ ತುಣುಕುಗಳಲ್ಲಿ ಪ್ರತಿಬಿಂಭಿಸಿವೆ..
ಪಕ್ಷದ ತುಂಬಾ ಗೂಂಡಾಗಳನ್ನು ತುಂಬಿಸಿಕೊಂಡಿರುವ ಕಾಂಗ್ರೆಸ್ಸಿಗೆ ಬಿಜೆಪಿಯ ನೈತಿಕತೆ ಬಗ್ಗೆ ಮಾತಾಡುವ ಹಕ್ಕಿಲ್ಲ. @INCkarnataka ಮುನ್ನೆಲೆಯ ನಾಯಕರೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು,ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವಂತಾಗಿದೆ. #RowdyCongress
2/n pic.twitter.com/SBX8J3JXF1
— BJP Karnataka (@BJP4Karnataka) December 4, 2022
ಮಾಜಿ ಸಚಿವ ನಿನಯ್ ಕುಲಕರ್ಣಿ ಅವರ ವಿರುದ್ದದ ಕೊಲೆ ಪ್ರಕರಣ, ಯುವ ಕಾಂಗ್ರೆಸ್ ಅಧ್ಯಕ್ಷ ನಲಪ್ಪಾಡ್ ನಡೆಸಿರುವ ಕೊಲೆ ಯತ್ನ ಕೇಸ್ ಮಾತ್ರವಲ್ಲ, ಕಾರ್ಪೊರೇಟರ್ ನಟರಾಜ್ ಹತ್ಯೆ ಕೇಸ್‌ನಲ್ಲಿ ದಿನೇಶ್ ಗುಂಡೂರಾವ್ ಕೈವಾಡ ಇತ್ತು ಎಂಬ ಪ್ರಸಂಗಗಳನ್ನೂ ಈ ವೀಡಿಯೋದಲ್ಲಿ ಬಿಜೆಪಿ ಮೆಲುಕು ಹಾಕಿದೆ.
ಪಕ್ಷದ ತುಂಬಾ ಗೂಂಡಾಗಳನ್ನು ತುಂಬಿಸಿಕೊಂಡಿರುವ ಕಾಂಗ್ರೆಸ್ಸಿಗೆ ಬಿಜೆಪಿಯ ನೈತಿಕತೆ ಬಗ್ಗೆ ಮಾತಾಡುವ ಹಕ್ಕಿಲ್ಲ. @INCkarnataka ಮುನ್ನೆಲೆಯ ನಾಯಕರೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು,ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವಂತಾಗಿದೆ. #RowdyCongress
3/n pic.twitter.com/gaJTPI5CWm
— BJP Karnataka (@BJP4Karnataka) December 4, 2022
ಕಾಂಗ್ರೆಸ್ ಪಕ್ಷದ ಮುನ್ನೆಲೆಯ ನಾಯಕರೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ‘ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವಂತಾಗಿದೆ’ ಎನ್ನುತ್ತಾ ಈ ವೀಡಿಯೋಗಳನ್ನು ಹರಿಯಬಿಟ್ಟಿರುವ ಬಿಜೆಪಿಯು, ‘ಈ ಕಳಂಕ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ತಿಳಿಸುವ ನಿಟ್ಟಿನಲ್ಲಿ ಈ ವೀಡಿಯೋಗಳನ್ನು ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ.















































