ಬೆಂಗಳೂರು: ಅತ್ಯಂತ ಕೊಳಕು ಭಾಷೆ ಯಾವುದು? ಎಂದು ಗೂಗಲ್‌ನಲ್ಲಿ ಹುಡುಕಾಡಿದರೆ ಸಿಗುತ್ತಿದ್ದುದು ‘ಕನ್ನಡ’.
ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕನ್ನಡಿಗರು ತಿರುಗಿಬಿದ್ದಿದ್ದಾರೆ. ರಾಜಕಾರಣಿಗಳು, ಸಂಘ ಸಂಸ್ಥೆಗಳ ಪ್ರಮುಖರ ಸಹಿತ ವಿವಿಧ ವಲಯಗಳಿಂದ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಈ ಬೆಳವಣಿಗೆಯಿಂದ ಗಲಿಬಿಲಿಗೊಂಡಿರುವ ಗೂಗಲ್ ಸಂಸ್ಥೆ ಕ್ಷಮೆಯಾಚಿಸಿದೆ.
ಹುಡುಕಾಟ ಫಲಿತಾಂಶವು ತನ್ನ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಗೂಗಲ್ ಸಂಸ್ಥೆ ಸ್ಪಷ್ಟನೆಯನ್ನೂ ನೀಡಿದೆ.
We apologize for the misunderstanding and hurting any sentiments. pic.twitter.com/nltsVezdLQ
— Google India (@GoogleIndia) June 3, 2021