ಬೆಂಗಳೂರು: ನಾಡು ಹೊಸ ವರ್ಷಾಚರಣೆಯ ಸಂದರ್ಭದಲ್ಲಿದ್ದು ಸಿಎಂ ಸಿದ್ದರಾಮಯ್ಯ ಅವರು ವಿಶೇಷ ರೀತಿಯಲ್ಲಿ ಶುಭಾಷಯ ಹಂಚಿಕೊಂಡಿದ್ದಾರೆ.
‘ಬದಲಾವಣೆಯ ವರ್ಷದಿಂದ ಭರವಸೆಯ ವರ್ಷಕ್ಕೆ ಕಾಲಿಡುತ್ತಿರುವ ನನ್ನ ಪ್ರೀತಿಯ ನಾಡ ಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು’ ಎಂದು ಮುಖ್ಯಮಂತ್ರಿಯವರು ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿದ್ದಾರೆ.
ಹಳೆಯ ವರ್ಷದಲ್ಲಿ ಮುನಿಸುಕೊಂಡಿದ್ದ ಪ್ರಕೃತಿ ಹೊಸ ವರ್ಷದಲ್ಲಿ ನಮಗೆಲ್ಲ ಒಲಿದು ಬರಲಿ, ಸಕಲ ಜೀವಾತ್ಮಗಳಿಗೆ ಲೇಸನ್ನು ಉಂಟು ಮಾಡಲಿ, 2024ರ ಇಡೀ ವರ್ಷ ತಮ್ಮ ಬದುಕು ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ, ಎಲ್ಲ ಕನಸುಗಳು ನನಸಾಗಲಿ’ ಎಂದು ಹಾರೈಸಿರುವ ಅವರು ‘ನಾವೆಲ್ಲರೂ ಕೂಡಿ ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಭರವಸೆಗಳೊಂದಿಗೆ ಬರಮಾಡಿಕೊಳ್ಳೋಣ’ ಎಂದಿದ್ದಾರೆ.
ಬದಲಾವಣೆಯ ವರ್ಷದಿಂದ ಭರವಸೆಯ ವರ್ಷಕ್ಕೆ ಕಾಲಿಡುತ್ತಿರುವ ನನ್ನ ಪ್ರೀತಿಯ ನಾಡ ಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಹಳೆಯ ವರ್ಷದಲ್ಲಿ ಮುನಿಸುಕೊಂಡಿದ್ದ ಪ್ರಕೃತಿ ಹೊಸ ವರ್ಷದಲ್ಲಿ ನಮಗೆಲ್ಲ ಒಲಿದು ಬರಲಿ,
ಸಕಲ ಜೀವಾತ್ಮಗಳಿಗೆ ಲೇಸನ್ನು ಉಂಟು ಮಾಡಲಿ,
2024ರ ಇಡೀ ವರ್ಷ ತಮ್ಮ ಬದುಕು ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ,
ನಿಮ್ಮ… pic.twitter.com/zUAQ8vYQbZ— Siddaramaiah (@siddaramaiah) January 1, 2024