ದೆಹಲಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ‘ವಿಶ್ವ ಸಂಸ್ಥೆಯ ಆಹಾರ ವ್ಯವಸ್ಥೆಯ ಶೃಂಗ ಸಭೆ-2021’ರಲ್ಲಿ ಭಾರತದ ಪರವಾಗಿ ಭಾಗವಹಿಸಿದರು.
ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ‘ಸುಸ್ಥಿರ ಅಭಿವೃದ್ಧಿಯ ಜಾಗತೀಕ ಗುರಿಗಳನ್ನು ಸಾಧಿಸಲು ಆಹಾರ ವ್ಯವಸ್ಥೆಯಲ್ಲಿನ ಸವಾಲುಗಳು’ ಈ ಕುರಿತು ದೇಶದ ಪರವಾಗಿ ವಿಚಾರ ಮಂಡಿಸಿ ಗಮನಸೆಳೆದರು.
ಕೃಷಿ ಪ್ರಧಾನ ರಾಷ್ಟ್ರದಲ್ಲಿ ರೈತರ ಅಭ್ಯುದಯಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಹಾಗೂ ಅನ್ನದಾತರ ಸುರಕ್ಷೆ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಕೈಗೊಳ್ಳುದ್ದೇಶಿಸಿರುವ ಕ್ರಮಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.
ಭಾರತ ಕೈಗೊಡಿರುವ ಕ್ರಮಗಳು, ಸುಸ್ಥಿರ ಅಭಿವೃದ್ಧಿಯನ್ನು ಹೊಂದುವ ನಿಟ್ಟಿನಲ್ಲಿರುವ ಕಾರ್ಯತಂತ್ರಗಳ ಕುರಿತು ಶೋಭಾ ಕರಂದ್ಲಾಜೆ ಅವರ ಚಿಂತನೆಗೆ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.