ನವದೆಹಲಿ: ದೇಶಾದ್ಯಂತ ರೈತರನ್ನು ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ರೈತ ಜಾಗೃತಿ ಯಾತ್ರೆಯನ್ನು 40 ದಿನಗಳ ಕಾಲ 32 ಸಾವಿರ ಹಳ್ಳಿಗಳ ರೈತರಿಂದ 10 ಲಕ್ಷ ರೈತರ ಸಹಿ ಸಂಗ್ರಹ ಪಡೆದು ಅಂತಿಮವಾಗಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರಾಷ್ಟ್ರೀಯ ರೈತ ಸಮಾವೇಶ ಗಮನಸೆಳೆಯಿತು.
ಯಾತ್ರೆಯ ಮುಖಂಡತ್ವವನ್ನು ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ದಲೈವಾಲಾ ಮಾತನಾಡಿ ಸ್ವಾತಂತ್ರ ಬಂದ 76 ವರ್ಷಗಳಿಂದ ಎಲ್ಲಾ ಸರ್ಕಾರಗಳು ರೈತರನ್ನು ನ್ಯಾಯಯುತ ಬೆಲೆ ನೀಡದೆ ಮೋಸಗೊಳಿಸುತ್ತಿವೆ. ಇದರಿಂದ ಏಳು ಲಕ್ಷ ರೈತರು ಸಾಲಗಾರರಾಗಿ ಆತ್ಮಹತ್ಯೆ ಶರಣಾಗಿದ್ದಾರೆ. ಈಗಿನ ಪ್ರಧಾನಿ ಮೋದಿ ಅವರು ಸ್ವಾಮಿನಾಥನ್ ವರದಿ ಜಾರಿ ಮಾಡುವ ಭರವಸೆ ನೀಡಿ. ಹಾಗೂ ರೈತರ ಆದಾಯ ದ್ವಿಗುಣ ಮಾಡುವ ಭರವಸೆಯನ್ನ ಹುಷಿಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಸಂಸದೀಯ ಸಮಿತಿ ರೈತರ ಬೇಡಿಕೆ ಎಂ ಎಸ್ ಪಿ ಖಾತ್ರಿ ಕಾನೂನು ಜಾರಿ ಮಾಡಬೇಕು ಎಂಬ ರೈತಪರ ವರದಿ ನೀಡಿದೆ. ಹಾಗೂ ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್ಸಿಂಗ್ ವರದಿಯು ರೈತ ಪರವಾಗಿ ನೀಡಿದೆ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಆದ್ದರಿಂದ ಸರ್ಕಾರ ಎಚ್ಚರಿಸಲು ರೈತರು ಜಾಗೃತರಾಗಿ ಕೇಂದ್ರವನ್ನ ಒತ್ತಾಯಿಸುತ್ತಿದ್ದೇವೆ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಸಹಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ. ಭಾರತ ಸರ್ಕಾರ ಅಮೆರಿಕದ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು ರೈತರನ್ನ ಬಲಿ ಕೊಡುವ ಕಾರ್ಯಕ್ಕೆ ಮುಂದಾಗಿದೆ ಇದನ್ನು ನಾವು ಸಹಿಸುವುದಿಲ್ಲ ಸರ್ಕಾರ ಎಚ್ಚೆತ್ತು ಒಪ್ಪಂದದಿಂದ ಹೊರಗೆ ಬರಬೇಕು ಎಂದರು.
ದೇಶದಲ್ಲಿ ಅಡಿಗೆ ಗ್ಯಾಸ್ ಕೊರತೆ ಉಂಟಾಗಿದೆ. ಯುದ್ಧ ನಿಲ್ಲುವ ತನಕ ನಾವೆಲ್ಲ ಗ್ಯಾಸ್ ಕಾಗಿ ಪರದಾಡಬೇಕಾಗಿದೆ ಆದ್ದರಿಂದ ರೈತರು ಯಥನಾಲ್ ಉತ್ಪಾದಿಸಲು ಹಾಗೂ ಮಾರಾಟ ಮಾಡಲು ಅನುಮತಿ ನೀಡಬೇಕು. ಎಥನಾಲ್ ಲಿಕ್ವಿಡ್ ಆದ ಕಾರಣ ಯಾವುದೇ ಆತಂಕ ಗಾಬರಿ ಇಲ್ಲ ದೇಶಕ್ಕೆ ದೇಶಕ್ಕೆ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ರೈತರಿಗೂ ಲಾಭ ಅಧಿಕವಾಗುತ್ತದೆ ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಅಭಿಮನ್ಯು ಕೋಹರ್ ಮಾತನಾಡಿ ರೈತ ಜಾಗೃತಿ ಯಾತ್ರೆಯಿಂದ ಕೋಟ್ಯಾಂತರ ರೈತರು ಸರ್ಕಾರದ ಶೋಷಣೆ ಬಗೆ ಜಾಗೃತರಾಗಿದ್ದಾರೆ ಸರ್ಕಾರಗಳು ಬಂಡವಾಳಶಾಹಿಗಳಿಗೆ ಸಾಲ ಮನ್ನಾ ಮಾಡುತ್ತಾರೆ ಆದರೆ ರೈತರಿಗೆ ಯಾಕೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರದಿಂದ ಎಲ್ಲಾ ತರದಲ್ಲೂ ರೈತರ ಶೋಷಣೆ ನಡೆಯುತ್ತಿದೆ ಎಂದರು
ತಮಿಳುನಾಡು ಪಿ ಆರ್ ಪಾಂಡನ್, ರಾಮನಗೌಂಡರ್, ಪಂಜಾಬಿನ ಸತ್ನನಾಮಸಿಂಗ್ ಬೆಹರು. ದೆಹಲಿಯ ಋಷಿಪಾಲ್ ಅಂಬಾವತ, ಮಧ್ಯಪ್ರದೇಶದ ಲೀಲಾದರ್ ರಜಪೂತ, ಬಲದೇವ್ ಸಿಂಗ್ ಶಿರಸ, ಉತ್ತರ ಪ್ರದೇಶದ ರಜೆವೀರ್ ಸಿಂಗ್ ಮೊದಲಾದವರು ಮಾತನಾಡಿದರು. ಸಮಾವೇಶದ ನಂತರ ಪೊಲೀಸರ ಸಮಕ್ಷಮದಲ್ಲಿ ಪ್ರಧಾನ ಮಂತ್ರಿಗಳ ಕಚೇರಿಗೆ ರೈತರು ಸಹಿ ಮಾಡಿದ ಮೂರು ಚೀಲಗಳ ಒತ್ತಾಯ ಪತ್ರವನ್ನು ಎಸ್ ಕೆ ಎಂ ಮುಖಂಡರು ಸಲ್ಲಿಸಿದರು.
















































