ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರು ಸಂಸದರಾಗಿರುವ ತಮಗೆ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಸ್ಪರ್ದೆಗೆ ಅವಕಾಶ ನೀಡದ ಬಗ್ಗೆ ಪ್ರಯಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್, ಯುವಜನರಿಗೆ ಅವಕಾಶ ನೀಡಬೇಕೆಂಬ ಹೈಕಮಾಂಡ್ ನಿರ್ಧಾರನ್ನು ಸ್ವಾಗತಿಸುವುದಾಗಿ ಹೇಳಿದರು.
ಮಂಗಳೂರು ಸಂಸದನಾಗಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದ ಅವರು, ಪಕ್ಷ ಹಾಗೂ ಮತದಾರರು ವಹಿಸಿದ್ದ ಜವಾಬ್ಧಾರಿಯನ್ಬು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯಾಧ್ಯಕ್ಷ ಸ್ಥಾನ, ಕೇರಳದ ಪ್ರಭಾರಿಯಾಗಿ ಜವಾಬ್ಧಾರಿ, ಸಹಿತ ದೊಡ್ಡ ಜವಾಬ್ಧಾರಿಗಳನ್ನು ಪಕ್ಷದ ಹಿರಿಯರು ವಹಿಸಿದ್ದರು. ಆ ಕೆಲಸಗಳನ್ನು ನಿರ್ವಹಿಸಿದ್ದೇನೆ. ಅದರಲ್ಲೂ ಒಂದೂವರೆ ದಶಕಗಳ ಕಾಲ ಸಂಸದನಾಗಿ ಪ್ರಮಾಣಿಕ ಕೆಲಸ ಮಾಡಿದ್ದೇನೆ. ಇದಕ್ಕೆ ಅವಕಾಶ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಟೀಲ್ ತಿಳಿಸಿದ್ದಾರೆ.
ಸಂಸದನಾಗಿ ಕ್ಷೇತ್ರಕ್ಕಾಗಿ ಕೇಳಿದ ಎಲ್ಲವನ್ನೂ ಕೇಂದ್ರ ಸರ್ಕಾರ ಕೊಟ್ಟಿದೆ. 15 ವರ್ಷಗಳ ಕಾಲ ಸಂಸದನಾಗಿ ಸುದೀರ್ಘ ಅವಧಿಯ ಅಧಿಕಾರವನ್ನು ಈ ಜನರೂ ನನಗೆ ಮಾತ್ರ ನೀಡಿದ್ದಾರೆ ಎಂದ ನಳಿನ್ ಕುಮಾರ್ ಕಟೀಲ್, ನಾನು ಸಂಘದ ಪ್ರಚಾರಕನಾಗಿ ಕಾರ್ಯಕರ್ತನಾಗಿ ಬಂದಿರುವೆ. ಇನ್ನು ಮುಂದೆ ಬಿಜೆಪಿ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.
ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ನೂತನ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ನಾನೂ ಶಕ್ತಿ ಮೀರಿ ಶ್ರಮಿಸುತ್ತೇನೆ. ಕಾರ್ಯಕರ್ತರೂ ಒಗ್ಗೂಡಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಸಂಕಲ್ಪ ಮಾಡಿದರು.






















































