ನವದೆಹಲಿ: NEET ಹಗರಣಕ್ಕೆ ಮೋದಿ ಸರ್ಕಾರ ಹೊಣೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯಿಂದಾಗಿ ಶಿಕ್ಷಣ ವ್ಯವಸ್ಥೆ ಕೊಳೆತುಹೋಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಸಮಸ್ಯೆಗೆ ಅಧಿಕಾರಶಾಹಿಗಳನ್ನು ಒಡೆದು ಹಾಕುವುದು ಪರಿಹಾರವಲ್ಲ ಎಂದು ಪ್ರತಿಪಾದಿಸಿರುವ ಖರ್ಗೆ, ಎನ್‌ಟಿಎಯನ್ನು ಸ್ವಾಯತ್ತ ಸಂಸ್ಥೆ ಎಂದು ಬಿಂಬಿಸಲಾಗಿತ್ತು, ಆದರೆ ವಾಸ್ತವದಲ್ಲಿ ಅದು ಬಿಜೆಪಿ/ಆರ್‌ಎಸ್‌ಎಸ್‌ನ ವಂಚಕ ಹಿತಾಸಕ್ತಿಗಳನ್ನು ಪೂರೈಸಲು ಸ್ಥಾಪಿಸಿದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಖರ್ಗೆ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.
ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಿದೆ. ಈ ಹಗರಣದ ಹೊಣೆಯನ್ನು ಮೋದಿ ಸರ್ಕಾರ ಹೊರಬೇಕಿದೆ ಎಂದಿರುವ ಅವರು, ಇದೀಗ NEET-PG ಪರೀಕ್ಷೆಯನ್ನು ಮುಂದೂಡಲಾಗಿದೆ. ಕಳೆದ 10 ದಿನಗಳಲ್ಲಿ 4 ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ/ಮುಂದೂಡಲಾಗಿದೆ. ಪೇಪರ್ ಸೋರಿಕೆ, ಭ್ರಷ್ಟಾಚಾರ, ಅಕ್ರಮಗಳು ಮತ್ತು ಶಿಕ್ಷಣ ಮಾಫಿಯಾ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನುಸುಳಿದೆ ಎಂದು ಬೊಟ್ಟು ಮಾಡಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಬಗ್ಗೆ ತಮ್ಮದೇ ದಾಟಿಯಲ್ಲಿ ಲೇವಡಿ ಮಾಡಿದ್ದಾರೆ.
In the NEET Scam, the buck stops at the doorstep of the top echelons of the Modi Govt.
Shuffling the bureaucrats is no solution to the endemic problem in the Education system rotted by the BJP.
NTA was projected to be an autonomous body, but in reality was made to serve the…
— Mallikarjun Kharge (@kharge) June 22, 2024