ಬೆಂಗಳೂರು; ಕ್ರೈಸ್ತ ಸಮುದಾಯದ ಪವಿತ್ರ ‘ಈಸ್ಟರ್ ಸಂಡೇ’ ಆಚರಣೆ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಗುಡ್‌ಫ್ರೈಡೇ ನಂತರದ ಭಾನುವಾರದಂದು ಈಸ್ಟರ್ ಸಂಡೇ ಆಚರಣೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಭಾನುವಾರದ (ಮಾರ್ಚ್ 31) ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಮುಂದೂಡಲ್ಪಟ್ಟಿರುವ ಪರೀಕ್ಷಾ ದಿನಾಂಕ ಬಗ್ಗೆ ಸದ್ಯವೇ ಮಾಹಿತಿ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.