ದೆಹಲಿ: ದಿಢೀರ್ ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ.ಸದಾನಂದ ಗೌಡ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸಂಪುಟಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಜರಿ ಮಾಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಡಿವಿ ಸದಾನಂದ ಗೌಡರು ರಾಜೀನಾಮೆ ನೀಡಿದ್ದಾರೆ.
ಇದೇ ವೇಳೆ, ಸುಮಾರು 12 ಮಂದಿ ಸಚಿವರು ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಸಚಿವ ಹರ್ಷವರ್ಧನ್, ಕಾರ್ಮಿಕ ಸಚಿವ ಸಂತೋಷ್ವಗಂಗ್ವಾರ್, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಕೂಡಾ ರಾಜೀನಾಮೆ ನೀಡಿದ್ದು ಅವರಿಗೆ ಪಕ್ಷ ಸಂಘಟನೆಯ ಹೊಣೆ ವಹಿಸಲು ತೀರ್ಮಾನಿಸಲಾಗಿದೆ.
ರಾಜೀನಾಮೆ ನೀಡಿದ ಸಚಿವರ ಪಟ್ಟಿ ಇಲ್ಲಿದೆ:
- ಡಾ ಹರ್ಷವರ್ಧನ್
- ರಮೇಶ ಪೊಕ್ರಿಯಾಲ್
- ಡಿ.ವಿ.ಸದಾನಂದ ಗೌಡ
- ದೇವೇಂದ್ರ ಚೌಧರಿ
- ಸಂತೋಷ ಗಂಗವರ್
- ತಾವರಚಂದ ಗೆಹ್ಲೋಟ್
- ರತನ್ ಲಾಲ್ ಕಟಾರಿಯಾ
- ಸಂಜಯ್
- ಬಾಬುಲ್ ಸುಪ್ರಿಯೊ
- ರಾವ್ ಸಾಹೇಬ್ ದಾನವೆ ಪಾಟೀಲ್
- ಪ್ರತಾಪ್ ಸಾರಂಗಿ
- ಅಶ್ವಿನ್ ಚೌಬೆ