ಮಂಗಳೂರು: ಬಂದರು ನಗರಿಯಲ್ಲಿ ಡ್ರಗ್ಸ್ ಜಾಲ ನಿಗೂಢವಾಗಿ ದಂಧೆ ನಡೆಸುತ್ತಿದ್ದು, ಎಂಡಿಎಂಎ ಮಾತ್ರೆಗಳ ಮಾರಾಟ ಮುಂದುವರಿದಿದೆ. ಈ ಬಗ್ಗೆ ಕಾರ್ಯಾಚರಣೆಗಿಳಿದಿರುವ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪಡೀಲ್ ರೈಲ್ವೇ ಬ್ರಿಜ್ನಿಂದ ಸರಿಪಳ್ಳಕ್ಕೆ ಹೋಗುವ ರಸ್ತೆಯಲ್ಲಿ ಸ್ಕೂಟರ್ನಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸರು ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಜುಟ್ಟು ಅಶ್ಪಾಕ್ ಮತ್ತು ಉಮರ್ ಫಾರೂಕ್ ಇರ್ಫಾನ್ ಎಂದು ಗುರುತಿಸಲಾಗಿದೆ.


























































