ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಪರಂಜ್ಯೋತಿ ಚಾರಿಟಬಲ್ ಟ್ರಸ್ಟ್ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಗಮನಸೆಳೆಯಿತು.
ಟ್ರಸ್ಟ್ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು, ಹಾಲು-ಬ್ರೆಡ್ ವಿತರಣೆ ಮಾಡಿ ಅಸಹಾಯಕರಿಗೆ ನೆರವು ನೀಡಲಾಯಿತು.
ಟ್ರಸ್ಟ್ ನ ಅಧ್ಯಕ್ಷ ರವಿಕುಮಾರ್, ಕರವೇ (ನಾರಾಯಣಗೌಡ) ಬಣದ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಸಹಿತ ಹಲವು ಪ್ರಮುಖರ ಉಪಸ್ಥಿತಿಯಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಈ ವೇಳೆ ಕೈಗೊಳ್ಳಲಾಯಿತು.