ದೊಡ್ಡಬಳ್ಳಾಪುರ: ಬಾಡಿಗೆ ಮನೆಯಲ್ಲಿ ರಕ್ತದ ಮೊಡುವಿನಲ್ಲಿ ಗೃಹಿಣಿಯೋರ್ವರ ಮೃತ ದೇಹ ಪತ್ತೆಯಾಗಿರುವ ಘಟನೆ ಕೋಳೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಭಾರತಿ (27) ಎಂದು ಗುರುತಿಸಲಾಗಿದ್ದು, ಆಕೆಯ ಸುಮಾರು 5 ವರ್ಷದ ಹೆಣ್ಣು ಮಗು ಸ್ಥಳದಿಂದ ಕಾಣೆಯಾಗಿದೆ. ಆದರೆ ಮೃತಳ ಪತಿ ಸ್ಥಳದಲ್ಲಿಯೇ ಇರುವ ಕಾರಣ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಮೃತ ಭಾರತಿಯ ಪರಿಚಯಸ್ತನೊಬ್ಬನ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ., ಆತನೇ ಮಗುವನ್ನು ಅಪರಹಣ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಜರಣ ಬಗ್ಗೆ ತನಿಖೆ ನಡೆಸಿದ್ದಾರೆ.