ಬೆಂಗಳೂರು: ‘ಕಾಂತಾರ’ ಸಿನಿಮಾದ ಯಶಸ್ಸಿನಿಂದ ಬೀಗುತ್ತಿರುವ ರಿಷಬ್ ಶೆಟ್ಟಿ ಇದೀಗ ಈ ಸಿನಿಮಾದ ಎರಡನೇ ಅವತರಣಿಕೆಯ ಸಿದ್ಧತೆಯಲ್ಲಿದ್ದಾರೆ. ‘ಕಾಂತಾರ’ ಎರಡನೇ ಆವೃತ್ತಿಯ ತಯಾರಿಯಲ್ಲಿರುವ ರಿಷಬ್ ಶೆಟ್ಟಿ, ಇದೀಗ ತಾರೆಯರ ಹುಡುಕಾಟದಲ್ಲಿದ್ದಾರೆ. ಈ ಸಂಬಂಧ ಆಡಿಷನ್ ನಡೆಸಲು ಅವರು ಮುಂದಾಗಿದ್ದಾರೆ.
ಕಾಂತಾರದಲ್ಲಿ ನಟಿಸುವ ಆಸೆ ಒಂದಿರುವ ಮಂದಿಗೆ ಸುವರ್ಣಾವಕಾಶ ನೀಡಿರುವ ನಟ ರಿಷಬ್ ಶೆಟ್ಟಿ, ತಮ್ಮ ಸಿನಿಮಾದಲ್ಲಿ ನಟಿಸಲು 30 ರಿಂದ 60 ವಯಸ್ಸಿನ ಪುರುಷರು ಬೇಕಾಗಿದ್ದಾರೆ. 18 ರಿಂದ 60ರ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ ಎಂದು ಕರೆ ಕೊಟ್ಟಿದ್ದಾರೆ. ನಟನೆ ಬಯಸುವವರು ಹೆಸರು ನೋಂದಾಯಿಸುವಂತೆ ಸೂಚಿಸಿರುವ ಅವರು, ನೋಂದಣಿಗಾಗಿ Kantara.film ಲಿಂಕ್ ಒತ್ತಿ ತಮ್ಮ ಪ್ರತಿಭೆಯನ್ನು ತೋರಿಸಬಹುದು ಎಂದಿದ್ದಾರೆ. ಆದರೆ, ರೀಲ್ಸ್ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸುವುದಿಲ್ಲ ಎಂದು ರಿಷಬ್ ಶೆಟ್ಟಿ ಕ್ಷ ನಲ್ಲಿ ಪೋಸ್ಟ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
https://twitter.com/shetty_rishab/status/1734431446474047579/

















































