ದೊಡ್ಡಬಳ್ಳಾಪುರ: ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ದೊಡ್ಡಬಳ್ಳಾಪುರ: ತಾಲೂಕು ಕಚೇರಿಗೆ ಬೆಳಿಗ್ಗೆ ದಿಢೀರ್ ಲಗ್ಗೆ ಹಾಕಿದ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದರು.
ಯೋಜನೆಗಳ ಸವಲತ್ತು ವಿತರಣೆಗೆ ಅಧಿಕ ಹಣ ವಸೂಲಿ, ಗೋಮಾಳ ಜಮೀನು ಒತ್ತುವರಿಗೆ ಸಂಬಂಧಿಸಿ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ಲೋಕಾಯುಕ್ತ ಎಸ್ಪಿ ವಲೀ ಬಾಷ, ಡಿವೈಎಸ್ಪಿಗಳಾದ ಉಮಾಶಂಕರ್ , ರಾಮಕೃಷ್ಣ ,ಇನ್‌ಸ್ಪೆಕ್ಟರ್‌ಗಳಾದ ಸಲೀ ಅಹಮದ್ ,ಶಿವರುದ್ರಪ್ ಮೇಟಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ತಾಲೂಕು ಕಚೇರಿಯಲ್ಲಿ ನಡೆಯುತ್ತುದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಬಳಿ ದೂರು ನೀಡಿದ ಸನ್ನಿವೇಶವೂ ಗಮನಸೆಳೆಯಿತು.
























































