ಬೆಂಗಳೂರು: ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಚಿವ ಕೆ. ಸುಧಾಕರ್ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
‘ರಾಜ್ಯದ 225 ಶಾಸಕರ ಅನೈತಿಕ ಸಂಬಂಧದ ಬಗ್ಗೆ ತನಿಖೆಯಾಗಲಿ. ತನಿಖೆಯಾದ್ರೆ ಎಲ್ಲರ ಬಂಡವಾಳ ಜನಕ್ಕೆ ತಿಳಿಯುತ್ತದೆ. ನಾನು ಒಪನ್ ಆಗಿ ಚಾಲೆಂಜ್ ಮಾಡುತ್ತಿದ್ದೇನೆ. ಏನೇ ಬಂದರೂ ನಾನು ಎದುರಿಸಲು ಸಿದ್ಧವಾಗಿದ್ದೆನೆ’ ಎಂಬ ಸಚಿವ ಸುಧಾಕರ್ ಹೇಳಿಕೆಗೆ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಬುಧವಾರ ನೀಡಿದರು.
‘ಬಹಳ ಸಂತೋಷ, ಸುಧಾಕರ್ ಅವರು ಇಂತಹ ನುಡಿಮುತ್ತುಗಳನ್ನು ಇಡೀ ರಾಜ್ಯಕ್ಕೆ ಕೊಟ್ಟಿದ್ದಾರೆ. ಇದು ಇಲ್ಲಿ ಚರ್ಚೆ ಮಾಡುವ ವಿಚಾರವಲ್ಲ, ಸದನದಲ್ಲಿ ಚರ್ಚೆ ಮಾಡಬೇಕು. ಈ ಬಗ್ಗೆ ನಮ್ಮ ನಾಯಕರ ಜತೆ ಮಾತನಾಡುತ್ತೇನೆ. ಇದು ಸಾಮೂಹಿಕ ವಿಚಾರ’ ಎಂದರು.