ನಟ ಸುಶಾಂತ್ ಸಿಂಗ್ ರಜಪೂತ್ ನಿಧನದಿಂದಾಗಿ ಭಾರತದ ಸಿನಿಮಾ ಕ್ಷೇತ್ರದಲ್ಲಿ ಮೌನ ಆವರಿಸಿದೆ. ಅವರು ಅಭಿನಯಿಸಿರುವ ಹೊಸ ಚಿತ್ರಗಳು ಬಿಡುಗಡೆಗೆ ರೆಡಿಯಾಗಿದ್ದು ಸುಶಾಂತ್ ಸಿಂಗ್ ಜೊತೆ ದುಡಿಯುತ್ತಿದ್ದ ಮಂದಿ ಇನ್ನೂ ನೋವಿನಿಂದ ಹೊರಬಂದಿಲ್ಲ.
ಆದರೆ ನಿಗದಿಯಂತೆ ಸಿನಿಮಾ ಬಿಡುಗಡೆಯ ಹೊಣೆ ಚಿತ್ರತಂಡದ್ದಾಗಿದೆ. ಈ ನಡುವೆ, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ ‘ದಿಲ್ ಬೆಚಾರ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ತಾಗಿ ಸಡ್ಡು ಮಾಡುತ್ತಿದೆ. ನಟಿ ಸಂಜನಾ ಸಂಘಿಯವರ ಚೊಚ್ಚಲ ಚಿತ್ರ ಇದಾಗಿದ್ದು, ಮುಖೇಶ್ ಛಾಬ್ರಾ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.