ನವದೆಹಲಿ: ರಾಜಧಾನಿ ದೆಹಲಿ-ಎನ್ಸಿಆರ್ ಜನರು ವಾರಾಂತ್ಯದ ಭಾನುವಾರ ದಟ್ಟವಾದ ಮಂಜಿನಿಂದ ಕಂಗಾಲಾಗಿದ್ದಾರೆ. ದಟ್ಟ ಮಂಜಿನ ಕಾರಣದಿಂದಾಗಿ 100 ಕ್ಕೂ ಹೆಚ್ಚು ವಿಮಾನಗಳು ಮತ್ತು 22 ರೈಲುಗಳ ಸಂಚಾರ ಏರುಪೇರಾಗಿದೆ.
ರಾಷ್ಟ್ರೀಯ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಋತುಮಾನದ ಸರಾಸರಿಗಿಂತ ನಾಲ್ಕು ಹಂತಗಳು ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಭಾನುವಾರ ಬೆಳಿಗ್ಗೆ ದೆಹಲಿ ನಗರವು ದಟ್ಟವಾದ ಮಂಜಿನಿಂದ ಆವೃತವಾಗಿದ್ದು, ಬೆಳಿಗ್ಗೆ 8 ಗಂಟೆಗೆ ಸಫ್ದರ್ಜಂಗ್ನಲ್ಲಿ ಶೂನ್ಯ ತಾಪಮಾನ ಕಂಡುಬಂದಿದೆ. ಪಾಲಮ್ ಕೂಡ ಬೆಳಿಗ್ಗೆ 5 ಗಂಟೆ ಸುಮಾರಿಗೆ ಶೂನ್ಯ ಗೋಚರತೆಯನ್ನು ದಾಖಲಿಸಿದೆ.
ದಟ್ಟ ಮಂಜು ಮತ್ತು ಶೀತ ಅಲೆಯಿಂದಾಗಿ ನೂರಾರು ವಿಮಾನಗಳ ಹಾರಾಟ ವಿಳಂಬವಾಯಿತು. ಸುಮಾರು 22 ರೈಲುಗಳು ತಾಸುಗಟ್ಟಲೆ ತಡವಾಗಿ ಸಂಚರಿಸಿವೆ. ರಸ್ತೆಗಳಲ್ಲಿ ಸಂಚಾರವು ಅತ್ಯಂತ ನಿಧಾನವಾಗಿತ್ತು.
ದೆಹಲಿಯಲ್ಲಿ ಮಂಗಳವಾರದವರೆಗೆ ದಟ್ಟವಾದ ಮಂಜು ಮುಂದುವರೆಯಲಿದೆ ಎಂದು IMD ಮುನ್ಸೂಚನೆ ನೀಡಿದೆ.




























































