ವರದಿ: ಹೆಚ್.ಎಂ.ಪಿ.ಕುಮಾರ್
ದಾವಣಗೆರೆ : ದಾವಣಗೆರೆಗೆ ಬರಬೇಕಿದ್ದ ಆಕ್ಸಿಜನ್ ಸಿಲಿಂಡರ್ ಪೂರೈಕೆಯಲ್ಲಿ 4 ಗಂಟೆ ವಿಳಂಬ ಹಿನ್ನೆಲೆ.. ಕೆಲ ಕಾಲ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆಯಿಂದ ಗಲಿಬಿಲಿ, ಗೊಂದಲ.. ಈ ಸಂಧಿಕಾಲದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಆಕ್ಸಿಜನ್ ಕೊರತೆಯಿಂದ ಆಗಬಹುದಾಗಿದ್ದ ದೊಡ್ಡಮಟ್ಟದ ಅನಾಹುತವನ್ನ ತಪ್ಪಿಸಿದ್ದಾರೆ.
ಸ್ಥಳೀಯ ಖಾಸಗಿ ಆಸ್ಪತ್ರೆಗಳಿಂದ ಹಾಗೂ ಗ್ಯಾಸ್ ಏಜೆನ್ಸಿಗಳಿಂದ ತಕ್ಷಣಕ್ಕೆ ಕಾರ್ಯೊನ್ಮುಖರಾದ ಡಿಸಿ ಖುದ್ದು ತಾವೇ ಸ್ಥಳಕ್ಕೆ ಬಂದು ಎಲ್ಲರ ಜೊತೆ ಫೋನಿನಲ್ಲಿ ಸಂಪರ್ಕ ಮಾಡಿ ಆಕ್ಷಿಜನ್ ಸಿಲಿಂಡರ್ ತರಿಸಿದ್ದಾರೆ, ಆಕ್ಷಿಜನ್ ತರುವ ವಾಹನಗಳಿಗೆ ಎಸ್‌ಪಿ ಹನುಮಂತರಾಯ ಹಾಗೂ ದಾವಣಗೆರೆ ಬಡಾವಣೆ ಠಾಣೆ ಹಾಗೂ ಕೆ.ಟಿ.ಜೆ. ನಗರ ಪೋಲೀಸ್ ಠಾಣೆ ಸಿಬ್ಬಂದಿಗಳ ಜೊತೆ ಆಕ್ಷಿಜನ್ ಸಿಲಿಂಡರ್ ವಾಹನವನ್ನು ಕಳಿಸಿದ್ದಲ್ಲದೆ, ರಸ್ತೆಯಲ್ಲಿ ಬರುವಾಗ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಜಿಲ್ಲಾ ಆಸ್ಪತ್ರೆಗೆ ಸಿಲಿಂಡರ್ ತರಿಸಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಹಾಗೂ ಎಸ್‌ಪಿ ಹನುಮಂತರಾಯ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಕ್ಷಿಜನ್ ಸರಬರಾಜು ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಕ್ಸಿಜನ್ ಕೊರತೆಯಿಂದ ಆಗಬಹುದಾಗಿದ್ದ ಅನಾಹುತವನ್ನ ತಪ್ಪಿಸಿದ್ದಲ್ಲದೆ ಮುಂದೆ ಯಾವುದೇ ರೀತಿಯಾದಂತಹ ಆಕ್ಸಿಜನ್ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರುವ ಆಕ್ಷಿಜನ್ ಟ್ಯಾಂಕರ್ ನಲ್ಲಿ ಏನಾದರೂ ತೊಂದರೆ ಕಾಣಿಸಿದರೆ, ಪರ್ಯಾಯವಾಗಿ 200 ಕ್ಕೂ ಹೆಚ್ಚು ಜಂಬೋ ಸಿಲಿಂಡರ್ ಗಳ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ.
ಇಂದು ತೋರಣಗಲ್ಲಿನಿಂದ ವಾಹನ ಬರುವುದು ತಡವಾಗಿದೆ ಎಂದು ತಿಳಿದ ತಕ್ಷಣ ಡಿಸಿಯವರು ಜಿಲ್ಲಾ ಆಸ್ಪತ್ರೆಗೆ ಮುಂಜಾನೆಯೆ ತೆರೆಳಿ ಆಕ್ಷಿಜನ್ ಘಟಕದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ವಿಜಯನಗರ ಜಿಲ್ಲೆಯ ತೋರಣಗಲ್ಲಿನಿಂದ ಪ್ರತಿ ನಿತ್ಯ 6,000 ಲೀಟರ್ ಲಿಕ್ವಿಂಡ್ ಆಕ್ಸಿಜನ್ ಮುಂಜಾನೆ 8 ಗಂಟೆಗೆ ಬರಬೇಕಿತ್ತು ಆದರೆ ಅಲ್ಲಿ ಬಿಲ್ಲಿಂಗ್ ಮಾಡಿ ಆಕ್ಷಿಜನ್ ತುಂಭಿದ್ದ ಟ್ಯಾಂಕರ್ ಅನ್ನು ಕಳಿಸಲು ತಡ ಮಾಡಲಾಗಿತ್ತು. ನಾವು ಅಲ್ಲಿಯ ಸಿಬ್ಬಂದಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದಲ್ಲದೆ ನಮ್ಮ ಜಿಲ್ಲೆಯ ಪೋಲೀಸ್ ಬಂದೋಬಸ್ತ್ ನೊಂದಿಗೆ ಟ್ಯಾಂಕರ್ ದಾವಣಗೆರೆಗೆ ಬರಲಿದೆ ಎಂದು ತಿಳಿಸಿದರು. ಟ್ಯಾಂಕರ್ ಬರುವುದು 4 ಗಂಟೆ ತಡವಾಯ್ತು. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 350 ಸೋಂಕಿತರಿದ್ದಾರೆ, ಅವರಿಗೆ ಆಕ್ಸಿಜನ್ ಕೊರತೆ ಆಗಬಾರದು ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆ ಹಾಗೂ ಏಜೆನ್ಸಿಗಳಿಂದ ಜಂಬೋ ಆಕ್ಸಿಜನ್ ಸಿಲಿಂಡರ್ ತರಿಸಿದ್ದೇವೆ, ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಕೊರತೆ ಆಗದಂತೆ ವ್ಯವಸ್ಥೆ ಮಾಡಿದ್ದೇವೆ, ಪ್ರಸ್ತುತ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಡಿಸಿ ತಿಳಿಸಿದರು.