ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿರುವ ತುಂಗಭದ್ರೆ ಗರ್ಭಕ್ಕೆ ಕನ್ನ.. ಟಾಸ್ಕ್ ಫೊರ್ಸ್ ಕಣ್ಣಂಚಿನಲ್ಲೇ ದಂಧೆ.. ಅಕ್ರಮ ಮರಳು ದಂಧೆ ನಿಲ್ಲುವುದು ಯಾವಾಗ..? ಸಚಿವ ನಿರಾಣಿ ಇಲಾಖೆಯ ನಿರ್ಲಕ್ಷ್ಯ..
ವಿಶೇಷ ತನಿಖಾ ವರದಿ :
ಹೆಚ್.ಎಂ.ಪಿ.ಕುಮಾರ್
ದಾವಣಗೆರೆ: ಕಳೆದ 3 ತಿಂಗಳಿನಿಂದ ಹರಿಹರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸುವ ಅಧಿಕಾರಿಗಳೆ ಮರಳು ದಂಧೆಕೊರರ ಜೊತೆ ಶಾಮೀಲಾಗಿರುವ ಬಗ್ಗೆ ಗ್ರಾಮಸ್ಥರು ಮಾತಾಡುತ್ತಿದ್ದಾರೆ. ಹರಿಹರ ತಾಲ್ಲೂಕಿನಲ್ಲಿ ದೊರೆಯುವ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ಅಕ್ರಮವಾಗಿ ಪ್ರತಿ ದಿನ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ.
ಇತ್ತೀಚೆಗೆ ಎಂ ಸ್ಯಾಂಡ್ ಸಿಗದ ಕಾರಣ ನದಿಯ ಮರಳಿಗೆ ಭಾರಿ ಡಿಮ್ಯಾಂಡ್ ಬಂದಿದೆ ಅಲ್ಲದೆ ನದಿಯಲ್ಲಿ ಅಕ್ರಮ ಮರಳುಗಾರಿಕೆಯಿಂದ ಉತ್ತಮವಾದ ಮರಳು ಕೂಡ ಖಾಲಿಯಾಗುತ್ತಾ ಬಂದಿದೆ.
ತುಂಗಭದ್ರ ನದಿಯ ಮಧ್ಯ ಭಾಗದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಭೋಟ್, ತೆಪ್ಪಗಳ್ಲಲ್ಲಿ ಮರಳನ್ನು ತೆಗೆಯಲಾಗುತ್ತಿತ್ತು. ಕೆಲವರ ವಿರೋಧದಿಂದ ಅಕ್ರಮ ಮರಳುಗಾರಿಕೆ ಕೊಂಚಮಟ್ಟಿಗೆ ನಿಂತಿತ್ತು. ಮತ್ಯಾಕೋ ಏನೋ ಪುನಃ ಅಕ್ರಮ ಮರಳುಗಾರಿಕೆ ಸದ್ದಿಲ್ಲದೆ ನಡೆಯುತ್ತಿದ್ದರೂ ಯಾರೂ ಕೇಳೋರು ಹೇಳೋರು ಇಲ್ಲದಂತಾಗಿದೆ.
ಇನ್ನೊಂದೆಡೆ ಇಟಾಚಿ ಬಳಸಿ ಮರಳನ್ನು ನದಿಯಲ್ಲಿ 10 ರಿಂದ 20 ಅಡಿ ಮರಳನ್ನ ತೆಗೆದು ಬೃಹತ್ ಗಾತ್ರದ ಗುಂಡಿಗಳನ್ನು ಮಾಡಲಾಗಿದೆ. ಹರಿಹರ ಬಳಿಯ ಗುತ್ತೂರು, ನಾರಾಯಣ ಆಶ್ರಮದ ಹಿಂಭಾಗ, ಸಾರಥಿ ಗ್ರಾಮ, ಎಲ್ಲಮ್ಮ ದೇವಸ್ಥಾನ ರಸ್ಥೆ, ಹರ್ಲಾಪುರ, ಕೈಲಾಸ ನಗರ, ಮೆಟ್ಟಿಲುಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ.
ಮರಳನ್ನು ನದಿಯಿಂದ ತೆಗೆಯಲು ಅನ್ಯ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹರಿಹರ ತಾಲ್ಲೂಕಿನಲ್ಲಿ ತುಂಗಭದ್ರ ನದಿಯಲ್ಲಿ ಅಧಿಕೃತವಾಗಿ ಮರಳು ಗಣಿಗಾರಿಕೆ ಮಾಡಲು 5 ಪಾಯಿಂಟ್ ಗಳನ್ನ ಗುರುತಿಸಲಾಗಿದೆ. ಅಧಿಕೃತ ಮರಳುಗಾರಿಕೆ ನಡೆಸುವವರಿಗೆ ಅಕ್ರಮ ಮರಳುಗಾರಿಕೆಯಿಂದ ಗುತ್ತಿಗೆದಾರರಿಗೆ ಸಾಕಾಷ್ಟು ತೊಂದರೆಯಾಗಿದೆಯಂತೆ.
ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರ ಹಲವು ಆದೇಶಗಳನ್ನು ನೀಡಿದೆಯಾದರೂ ಗಣಿ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಮಾತ್ರ ತಮಗೆ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ.
ಇಷ್ಟಾದರೂ ಮುರುಗೇಶ್ ನಿರಾಣಿಯವರ ಗಣಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಾಗಿಲ್ಲವೇ ಎಂಬುದು ಪ್ರಶ್ನೆಯಾಗಿ ಕಾಡಿದೆ. ಈ ಪ್ರಶ್ನೆಗೆ ಸಚಿವ ನಿರಾಣಿಯವರೇ ಉತ್ತರಿಸಬೇಕಷ್ಟೇ..!!
ಮರಳು ಅಕ್ರಮದಲ್ಲಿ ಶಾಮೀಲಾಗಿರುವವರ ಬಗ್ಗೆ EXCLUSIVE REPORT.. ಮುಂದಿನ ಸಂಚಿಕೆಯಲ್ಲಿ