ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ವಿಚಾರಣೆಗೆ ನಟ ದರ್ಶನ್ ಬಂಧನವಾದ ಸಂದರ್ಭದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಹೊರಗಡೆ ಅಭಿಮಾನಿಗಳು ಜಮಾಯಿಸಿದ್ದರು. ಈ ಬೆಳವಣಿಗೆ ಬಗ್ಗೆ ನಟ ಪ್ರಥಮ್ ಸಹಿತ ಹಲವರು ಪ್ರತಿಕ್ರಿಯಿಸಿದ್ದರು. ಆ ಪ್ರತಿಕ್ರಿಯೆ ದರ್ಶನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೇ ವೇಳೆ, ದರ್ಶನ್ ವಿರುದ್ಧ ಹೇಳಿಕೆ ಆರೋಪದಲ್ಲಿ ನಟ ಪ್ರಥಮ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಬಗ್ಗೆ ದರ್ಶನ್ ಅಭಿಮಾನಿಯೊಬ್ಬ ಅವಾಚ್ಯ ಪದಗಳಿಂದ ನಿಂದಿಸಿ ಪೊಲೀಸ್ ತಾನೇ ಮೆಟ್ಟಿಲೇರುವಂತಾಗಿದೆ. ಅದಾಗಲೇ ಆತ ವೀಡಿಯೋ ಮಾಡಿ ನಟ ಪ್ರಥಮ್ ಹಾಗೂ ನಿರ್ಮಾಪಕ ಉಮಾಪತಿ ಅವರಲ್ಲಿ ಕ್ಷಮೆ ಯಾಚಿಸಿರುವ ವಿಡಿಯೋ ವೈರಲ್ ಆಗಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ‘X’ನಲ್ಲಿ ಪ್ರತಿಕ್ರಿಯಿಸಿರುವ ನಟ ಪ್ರಥಮ್, ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ. ಯಾರಿಗೋಸ್ಕರವೋ ದಯವಿಟ್ಟು ನಿಮ್ಮ ಲೈಫ್ ಹಾಳು ಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ ಬೇಕಿದ್ರೆ ಜೈಲಿಗೆ ಹೋಗಿ. ಪುಂಡಾಟ ಆಡ್ಕೊಂಡು ನಿಮ್ ಕುಟುಂಬ ಬೀದಿಗೆ ತರಬೇಡಿ. ನನ್ನ ಬಗ್ಗೆ ಮಾತಾಡುವಾಗಎಚ್ಚರಿಕೆ’ ಎಂದು ಬರೆದುಕೊಂಡಿದ್ದಾರೆ.
Kindly share.ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ.ನಮ್ಮ phn police ವಶಪಡಿಸಿಕೊಂಡು ಎಲ್ಲಾ comments,msgsನ ಗಮನಿಸುತ್ತಿದ್ದಾರೆ.ಯಾರಿಗೋಸ್ಕರವೋ ದಯವಿಟ್ಟು ನಿಮ್ಮlifeನ ಹಾಳುಮಾಡಿಕೊಳ್ಳಬೇಡಿ;ಕನ್ನಡಕ್ಕಾಗಿ,ಕಾವೇರಿಗಾಗಿ ಬೇಕಿದ್ರೆ ಜೈಲಿಗೆ ಹೋಗಿ.#ಪುಂಡಾಟ ಆಡ್ಕೊಂಡು ನಿಮ್ ಕುಟುಂಬ ಬೀದಿಗೆ ತರಬೇಡಿ.ನನ್ನ ಬಗ್ಗೆ ಮಾತಾಡುವಾಗಎಚ್ಚರಿಕೆ pic.twitter.com/w8GtFs26tU
— Olle Hudga Pratham (@OPratham) June 24, 2024























































