ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಕಾಂಗ್ರೆಸ್ ನಾಯಕ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಅವರು ‘ಭಯೋತ್ಪಾದಕ’ ಎಂದು ಘೋಷಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಮಹಾದೇವಪ್ಪ ಅವರ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ‘ಸಿದ್ರಾಮುಲ್ಲಾ ಖಾನ್’ ಎಂದು ಸಿ.ಟಿ.ರವಿ ಬಣ್ಣಿಸಿದ್ದರು. ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ನಡೆ ಅನುಸರಿಸಿದ್ದಾರೆ, ಮುಸ್ಲಿಮರ ಪರ ನಿಲುವನ್ನು ಹೊಂದಿರುವ ಅವರು ಟಿಪ್ಪು ಪರವಾಗಿ ನಿಂತಿದ್ದಾರೆ ಎಂದು ರವಿ ದೂರಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ಶೆಟ್ಟರ್, ಬೊಮ್ಮಾಯಿ, ಅಶೋಕ್ ಅವರು ಹಿಂದೆ ಮುಸ್ಲಿಮರ ಟೋಪಿ ಧರಿಸಿದ್ದ ಫೋಟೋಗಳನ್ನು ಟ್ಯಾಗ್ ಮಾಡಿ ಆ ನಾಯಕರಿಗೆ ಮುಸ್ಲಿಂ ಹೆಸರುಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿತ್ತು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಸಿ.ಟಿ.ರವಿ, ‘ನಮ್ಮನ್ನು ಹಿಂದೂ ಹುಲಿಗಳು’ ಎಂದು ಕರೆಯಬೇಕೇ ಹೊರತು ಮುಲ್ಲಾಗಳು ಎಂದು ಕರೆಯಲಾಗದು’ ಎಂದಿದ್ದರು.
ಈ ಜಟಾಪಟಿಯ ನಡುವೆ ಸಿದ್ದರಾಮಯ್ಯ ಆಪ್ತ ನಾಯಕ ಹೆಚ್.ಸಿ.ಮಹಾದೇವಪ್ಪ ಅವರು, ಸಿ.ಟಿ.ರವಿ ಅವರನ್ನು ‘ಭಯೋತ್ಪಾದಕ’ ಎಂದು ಬೊಟ್ಟು ಮಾಡಿದ್ದಾರೆ. ‘ಇಸ್ಲಾಮಾಬಾದ್ ನಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇನೆ ಎಂದು ಹೇಳುವ ಸಿ ಟಿ ರವಿ ಓರ್ವ ಭಯೋತ್ಪಾದಕ’ ಎಂದು ಹೆಚ್.ಸಿ.ಮಹಾದೇವಪ್ಪ ಟ್ವೀಟ್ ಮಾಡಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇನೆ ಎಂದು ಹೇಳುವ ಸಿ ಟಿ ರವಿ ಓರ್ವ ಭಯೋತ್ಪಾದಕ
— Dr H C Mahadevappa(Buddha Basava Ambedkar Parivar) (@CMahadevappa) December 7, 2022
ಕಾಂಗ್ರೆಸ್ ನಾಯಕನ ಈ ಟ್ವೀಟ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ತ್ರಿವರ್ಣ ಧ್ವಜ ಹಾರಿಸ್ತೀನಿ ಅಂದ್ರೆ ಭಯೋತ್ಪಾದಕ ಆಗ್ತಾನಾ? ಅದೆಂಗೆ ಅಂತ ಸ್ವಲ್ಪ ಹೇಳಿ ಮರಳು ಮಹಾದೇವ’ ಎಂದು ಒಬ್ಬರು ಪ್ರಶ್ನಿಸಿದರೆ, ಇನ್ನೊಬ್ಬರು, ‘ಇಸ್ಲಾಮಾಬಾದ್ನಲ್ಲಿ ಸಿ.ಟಿ.ರವಿ ಅವರು ತ್ರಿವರ್ಣ ಧ್ವಜ ಹಾರಿಸಿದರೆ ನಿಮಗ್ಯಾಕೆ ಉರಿ ಸ್ವಾಮಿ? ಅದ್ಹೇಗೆ ಭಯೋತ್ಪಾದಕರಾಗುತ್ತಾರೆ? ಜವಾಬ್ದಾರಿಯಿಂದ ಟ್ವೀಟ್ ಮಾಡುವುದನ್ನು ತಾವು ಕಲಿಯಬೇಕಾದ ಅವಶ್ಯಕತೆಯಿದೆ’ ಎಂದು ಖಾರವಾಗಿ ಕಮೆಂಟ್ ಹಾಕಿದ್ದಾರೆ.
‘ನಿಮಗೆ ಪಾಕ್ ಮೇಲೆ ಇರೋ ಪ್ರೀತಿ ಎಲ್ಲರಿಗೂ ತಿಳಿದಿದೆ ಅದನ್ನು ಪದೇ ಪದೇ ಸಾಬೀತು ಮಾಡೋ ಆವಶ್ಯಕತೆ ಇಲ್ಲ ಅಂತ ತ್ರಿವರ್ಣ ಧ್ವಜದ ಜನರ ಅಭಿಮತ..’ ಎಂಬ ಪ್ರತಿಕ್ರಿಯೆಯ ಜೊತೆಗೆ, ‘ಭಾರತೀಯ ಸೇನೆಯನ್ನು ಭಯೋತ್ಪಾದಕ ಸೇನೆ ಅಂತ ಹೇಳೋದು ಪಾಕಿಸ್ತಾನದವರು. ಹಾಗಾಗಿ ರವಿಯವರನ್ನು ಭಯೋತ್ಪಾದಕ ಅಂತ ಪಾಕಿಸ್ತಾನದವರು ಹೇಳುತ್ತಾರೆ’ ಎಂಬ ಕಮೆಂಟ್ ಕೂಡಾ ಗಮನಸೆಳೆದಿದೆ.
ಹಾಗಾದ್ರೆ, ಕಾಶ್ಮೀರದಲ್ಲಿ ದೇಶದ ಧ್ವಜ ಹಾರಿಸುವ ವಿಷಯ ಬಂದಾಗ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದ ನೀವು & ನಿಮ್ಮ ನಾಯಕರು ಏನು?
ದೇಶದ ಭೂ ಭಾಗವನ್ನು ಚೀನಾಗೆ ಬಿಟ್ಟು ಕೊಟ್ಟ ಕಾಂಗಿಗಳಿಗೆ ಏನನ್ನಬೇಕು?
ಚುನಾವಣೆ ಎದುರಿಸಲಾಗದೆ ಮೋಜಿನ ಯಾತ್ರೆ ಮಾಡುತ್ತಿರುವ ನಿಮ್ಮ ಪಕ್ಷದ @RahulGandhi ರನ್ನು ಏನನ್ನಬೇಕು?
ಇಸ್ಲಾಮಾಬಾದ್ ನಮ್ಮದೇ🇮🇳
— Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda) December 7, 2022
ಕೆಲವರಂತೂ ಈ ವಿಚಾರದಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿಯವರ ಹೆಸರನ್ನು ಎಳೆದುತಂದಿದ್ದಾರೆ. ‘ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಷಯ ಬಂದಾಗ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದ ನೀವು & ನಿಮ್ಮ ನಾಯಕರು ಏನು? ದೇಶದ ಭೂ ಭಾಗವನ್ನು ಚೀನಾಗೆ ಬಿಟ್ಟು ಕೊಟ್ಟ ಕಾಂಗಿಗಳಿಗೆ ಏನನ್ನಬೇಕು? ಚುನಾವಣೆ ಎದುರಿಸಲಾಗದೆ ಮೋಜಿನ ಯಾತ್ರೆ ಮಾಡುತ್ತಿರುವ ನಿಮ್ಮ ಪಕ್ಷದ ರಾಹುಲ್ ಗಾಂಧಿಯವರನ್ನು ಏನನ್ನಬೇಕು? ಎಂದು ಪ್ರಶ್ಬಿಸಿದ್ದಾರೆ. ಇದೇ ವೇಳೆ, ಬಹುತೇಕ ಮಂದಿ ನೆಟ್ಟಿಗರು ಸಿಟಿ.ರವಿ ಅವರನ್ನು ‘ಹಿಂದೂ ಹುಲಿ’ ಎಂದು ಬಿಂಬಿಸಿ ಅಚ್ಚರಿಗೆ ಕಾರಣರಾಗಿದ್ದಾರೆ.